ADVERTISEMENT

ಅಭಿವೃದ್ಧಿಗೆ ನೆರವು: ಶಾಸಕ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:40 IST
Last Updated 8 ಜುಲೈ 2017, 5:40 IST

ಹುಮನಾಬಾದ್: ‘ಎಲ್ಲ ವರ್ಗದವರ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ಕಾಂಗ್ರೆಸ್‌ ಸರ್ಕಾರ ಬದ್ಧ’ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಹೇಳಿದರು.
ತಾಲ್ಲೂಕಿನ ಘಾಟಬೋರಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇವಾನಗರ ತಾಂಡಾದಲ್ಲಿ ಶುಕ್ರವಾರ ನಡೆದ ಮರಿಯಮ್ಮ ಮತ್ತು ಸೇವಾಲಾಲ್‌ ಮಹಾರಾಜರ ದೇವಸ್ಥಾನ ಕಳಸಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸ್ವಚ್ಛ ಭಾರತ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜನತೆಗೆ ಶೌಚಾಲಯ ಮತ್ತಿತರ ಸೌಲಭ್ಯ ಕಲ್ಪಿಸಿದರೂ ನಿರ್ಮಿಸಿಕೊಳ್ಳಲು ಜನ ಆಸಕ್ತಿ ತೋರಿಸುತ್ತಿಲ್ಲ. ವಸತಿ
ಯೋಜನೆ ನೀಡಲು ಪ್ರಯತ್ನ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ ಮಾತನಾಡಿ, ‘ದೇವಸ್ಥಾನ ಅಭಿವೃದ್ಧಿಗೆ ₹3 ಲಕ್ಷ ನೀಡುವುದಾಗಿ ಘೋಷಿಸಿದರು. ಗೋವಿಂದ ಮಹಾರಾಜರು ಆಶೀರ್ವಚನ ನೀಡಿದರು. 

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ತಾಲ್ಲೂಕು ಪಂಚಾಯಿತಿ ಸದಸ್ಯ ಪರಮೇಶ್ವರ ಪಾಟೀಲ, ಮಾಜಿ ಸದಸ್ಯ ಅಭಿಜಿತ ಪಾಟೀಲ, ಮುಖಂಡರಾದ ಡಾ.ವಿಜಯಕುಮಾರ ಪಾಟೀಲ, ಭಾವುರಾವ ಪಾಟೀಲ, ಜ್ಞಾನೆಶ್ವರ ಭೋಸ್ಲೆ, ರಾಜಕುಮಾರ ಪಾಟೀಲ, ದೇವಸ್ಥಾನ ಸಮಿತಿ ಅಧ್ಯಕ್ಷ ಕಿಶನ್‌ ನಾಯಕ, ವಿಲಾಸ ಜಾಧವ್, ಶಿವಾಜಿರಾವ ರಘು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಬುಳ್ಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.