ADVERTISEMENT

ಆರು ಮದ್ಯದಂಗಡಿಗೆ ಬೀಗ

ಹುಮನಾಬಾದ್: ನೀತಿ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 6:42 IST
Last Updated 23 ಏಪ್ರಿಲ್ 2018, 6:42 IST

ಹುಮನಾಬಾದ್: ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಹುಮನಾಬಾದ್ ಪಟ್ಟಣದ ನಾಲ್ಕು, ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಎರಡು ಸೇರಿ ಆರು ಮದ್ಯದ ಅಂಗಡಿಗಳ ಮಾಲೀಕರ ವಿರುದ್ಧ ಭಾನುವಾರ ದೂರು ದಾಖಲಿಸಿಕೊಂಡು ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.

‘ಹುಮನಾಬಾದ್ ರುದ್ರಂ ಬಾರ್‌ನ ಹರವಿಂದರ್‌ಸಿಂಗ್‌, ಚಮನ್‌ ಬಾರ್‌ನ ರೇವಣಸಿದ್ದಪ್ಪ ಪಾಟೀಲ, ಪ್ರೀತಿ ಸಾಗರ್ ಸುಭಾಶ ಬತಲಿ, ಜ್ಯೋತಿ ವೈನ್ಸ್‌ ಪಿ.ದೇವಣಿ ಮತ್ತು ಹಳ್ಳಿಖೇಡ(ಬಿ) ಪಟ್ಟಣದ ಭಾಲ್ಕೇಶ್ವರ ವೈನ್ ಶಾಪ್‌ನ ಮಲ್ಲಿಕಾರ್ಜುನ ಮತ್ತು ರೆಹೆನಾ ಬೇಗಂ ಅವರ ವಿರುದ್ಧ ದೂರು ದಾಖಲಿಸಿಕೊಂಡು ಮದ್ಯದ ಅಂಗಡಿಗಳಿಗೆ ಬೀಗ ಹಾಕಲಾಗಿದೆ’ ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವುದು ಹಾಗೂ ಪರವಾನಗಿ ನವೀಕರಿಸಿಕೊಳ್ಳದಿರುವ ಆರೋಪ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರು ಅಂಗಡಿಗಳಿಗೆ ಬೀಗ ಜಡಿಯಲಾಗಿದೆ’ ಎಂದು ಅಬಕಾರಿ ಇನ್‌ಸ್ಪೆಕ್ಟರ್‌ ರವೀಂದ್ರ ಪಾಟೀಲ ತಿಳಿಸಿದ್ದಾರೆ. ಸಬ್‌ಇನ್‌ಸ್ಪೆಕ್ಟರ್‌ ಜಟ್ಟೆಪ್ಪ ಬೇಲೂರೆ ಹಾಗೂ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.