ADVERTISEMENT

ಬೃಹತ್‌ ರ್‍‍ಯಾಲಿಗೆ ಒಂದು ಲಕ್ಷ ಲಿಂಗಾಯತರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:39 IST
Last Updated 18 ಜುಲೈ 2017, 5:39 IST

ಬೀದರ್: ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ನಗರದಲ್ಲಿ ಜುಲೈ 19ರಂದು ನಡೆಯಲಿರುವ ರ್‌್ಯಾಲಿಯಲ್ಲಿ ಸುಮಾರು ಒಂದು ಲಕ್ಷ ಲಿಂಗಾಯತರು ಪಾಲ್ಗೊಳ್ಳಲಿದ್ದಾರೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಹೇಳಿದರು.

‘ಕಲಬುರ್ಗಿಯಿಂದ ಆರು ಸಾವಿರ ಜನ ವಾಹನಗಳಲ್ಲಿ ಬರಲಿದ್ದಾರೆ. ಹಾವೇರಿ, ವಿಜಯಪುರ, ರಾಣಿ ಬೆನ್ನೂರು, ಕೊಪ್ಪಳ, ಲಿಂಗಸಗೂರು, ಜೇವರ್ಗಿ, ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದಲೂ ಲಿಂಗಾಯತರು ಭಾಗವಹಿಸಲಿದ್ದಾರೆ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿರುವುದನ್ನು ಬೇರೆಯವರಿಂದ ಕೇಳಿ ಅರಿಯಬೇಕಿಲ್ಲ. ವಚನ ಸಾಹಿತ್ಯದಲ್ಲಿ ಇದಕ್ಕೆ ಉತ್ತರ ಇದೆ. ಜನಪದ ಪದ್ಯಗಳಲ್ಲೂ ಬಸವಣ್ಣ ನವಪಥ ಕೊಟ್ಟಿರುವ ಉಲ್ಲೇಖ ಇದೆ’ ಎಂದರು.

ADVERTISEMENT

‘ವೀರಶೈವ ಶೈವ ಪ್ರಭೇದದ ಒಂದು ಪಂಗಡ. ವೀರಶೈವ-ಲಿಂಗಾಯತ ಎನ್ನುವ ಗೊಂದಲ ಬಿಟ್ಟು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ’ ಎಂದು ತಿಳಿಸಿದರು.

‘ಬೀದರ್‌ನಲ್ಲಿ ನಡೆಯಲಿರುವ ರ್‌್್ಯಾಲಿಯಲ್ಲಿ ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು. ಶ್ರೀಶೈಲ ಜಗದ್ಗುರುಗಳ ಮಾತುಗಳನ್ನು ಖಂಡಿಸಿದ ಬೆಲ್ದಾಳ ಸಿದ್ಧರಾಮ ಶರಣರು, ‘ಒಂದು ವಚನದ ಕಟ್ಟಿನಲ್ಲಿ ಮಾತ್ರ ವೀರಶೈವ ಉಲ್ಲೇಖ ಇದೆ. ಬೇರೆ ಪ್ರತಿಯಲ್ಲಿ ಕಂಡು ಬರುವುದಿಲ್ಲ. ಹೀಗಾಗಿ ಇದನ್ನೂ ಯಾರೋ ಉದ್ದೇಶಪೂರ್ವಕವಾಗಿ ಸೇರಿಸಿರಬಹುದು’ ಎಂದು ತಿಳಿಸಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುವಾಲಿ, ಸೋಮನಾಥ ಪಾಟೀಲ, ಬಸವರಾಜ ಧನ್ನೂರು, ವಿರೂಪಾಕ್ಷ ಗಾದಗಿ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.