ADVERTISEMENT

‘ಮಾತೃಭಾಷೆ ಶಿಕ್ಷಣದಿಂದ ಪ್ರಗತಿ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 14 ಮೇ 2017, 7:23 IST
Last Updated 14 ಮೇ 2017, 7:23 IST

ಚಿಟಗುಪ್ಪ: ‘ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಲ್ಪಿಸಿಕೊಡುವುದರಿಂದ ಅವರ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರಡ್ಡಿ ಹೇಳಿದರು.

ಸಮೀಪದ ಮೀನಕೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್‌ 102ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬೇಸಿಗೆ ಸಂಭ್ರಮ ಶಿಬಿರದ ಮಕ್ಕಳಿಗೆ ಸಮವಸ್ತ್ರ ವಿತರಿಸಿ, ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಬೆಳವಣಿಗಾಗಿ ನಡೆಸುತ್ತಿರುವ ಹಲವು ಕಾರ್ಯಕ್ರಮಗಳು ಎಲ್ಲರ ಮನೆ–ಮನಗಳಿಗೆ ತಲುಪಿಸುವ ಕೆಲಸ ಪದಾಧಿಕಾರಿಗಳಿಂದ ಆಗಬೇಕು’ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಸುನಿಲ ಮೇತ್ರೆ , ಬೇಸಿಗೆ ಸಂಭ್ರಮ ಕಾರ್ಯಕ್ರಮದ ನೋಡೆಲ್ ಅಧಿಕಾರಿ ರಾಜಕುಮಾರ್ ಆರ್ಯ, ಸಿಆರ್‌ಪಿ ಶಂಭುಲಿಂಗ ರೂಗನ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಮಡೆಪ್ಪ ಕುಂಬಾರ್, ಬಿಆರ್‌ಪಿ ವೀರಣ್ಣ ಪಂಚಾಳ, ಭೀಮರಾವ ಪ್ರಸಾದ್, ಅಶೋಕ ಸಿಂಧೋಲ್, ಶಿವರಾಜ್, ಶ್ರೀಧರ್ ಚವ್ಹಾಣ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.