ADVERTISEMENT

ವಿದ್ಯಾಭಾರತಿ ಪ್ರಾಂತೀಯ ಕ್ರೀಡಾಕೂಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 8:46 IST
Last Updated 30 ಜುಲೈ 2014, 8:46 IST

ಬೀದರ್: ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕವು ನಗರದ ಬಿ.ವಿ. ಭೂಮ­ರೆಡ್ಡಿ ಕಾಲೇಜಿನಲ್ಲಿ ಆಯೋ­ಜಿಸಿದ್ದ ಪ್ರಾಂತೀಯ ಮಟ್ಟದ ಎರಡು ದಿನಗಳ ಕೊಕ್ಕೊ ಹಾಗೂ ಕಬಡ್ಡಿ ಕ್ರೀಡಾಕೂಟ ಮಂಗಳವಾರ ತೆರೆ ಕಂಡಿತು.

ಬಾಲ ವರ್ಗ, ಕಿಶೋರ ವರ್ಗ, ತರುಣ ವರ್ಗ ವಿಭಾಗದ ಕೊಕ್ಕೊ ಹಾಗೂ ಕಬಡ್ಡಿ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸ­ಲಾಯಿತು. ಪ್ರಥಮ ಸ್ಥಾನ ಗಳಿಸಿರುವ ತಂಡಗಳು ಕೇರಳದಲ್ಲಿ ನಡೆಯಲಿರುವ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿವೆ.

ಕಬಡ್ಡಿ, ಕೊಕ್ಕೊ ದೇಸಿ ಕ್ರೀಡೆಗಳಾ­ಗಿದ್ದು, ಇವುಗಳಿಗೆ ಪ್ರೋತ್ಸಾಹ ಅಗತ್ಯ­ವಿದೆ ಎಂದು ಸಮಾರೋಪ ಸಮಾ­ರಂಭ­ದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅಭಿಪ್ರಾಯಪಟ್ಟರು.

ಪ್ರಾಂತ ಶಾರಿರೀಕ ಶಿಕ್ಷಣ ಪ್ರಮುಖ ವೈಜಿನಾಥ ರೊಟ್ಟೆ ಅಧ್ಯಕ್ಷತೆ ವಹಿಸಿ­ದ್ದರು. ಬಿ.ವಿ.ಭೂಮರೆಡ್ಡಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ.ಎಸ್.ಪಾಟೀಲ, ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಆರ್.ರೆಡ್ಡಿ, ವಿದ್ಯಾಭಾರತಿ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಇದ್ದರು. ಸ್ವರ್ಣಾ ಟಿ.ಪಿ. ಸ್ವಾಗತಿಸಿ, ಶಶಿಕಲಾ ನಿರೂಪಿಸಿ, ಧನರಾಜ ರೆಡ್ಡಿ ವಂದಿಸಿ­ದರು. ವಿವಿಧ ಜಿಲ್ಲೆಗಳ ವಿದ್ಯಾ­ಭಾರತಿ ಕರ್ನಾಟಕ ಸಂಚಾಲಿತ ಶಾಲೆ­ಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.