ADVERTISEMENT

ವೃದ್ಧಾಶ್ರಮ ಸಂಸ್ಕೃತಿ ಬೇಡ

ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಂಸದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:42 IST
Last Updated 20 ಮಾರ್ಚ್ 2017, 7:42 IST

ಕಮಲನಗರ: ವೃದ್ಧಾಶ್ರಮ ನಮ್ಮ ದೇಶದ ಸಂಸ್ಕೃತಿಯಲ್ಲ. ದೇಶದ ಸಂಸ್ಕೃತಿಗೆ ಮಾರಕವಾಗಿದೆ ಎಂದು ಸಂಸದ ಭಗವಂತ ಖೂಬ ಹೇಳಿದರು.
ಶನಿವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಇಲ್ಲಿ ಆಯೋಜಿಸಿದ್ದ 81ನೇ ತ್ರಿಮೂರ್ತಿ ಮಹಾಶಿವರಾತ್ರಿ ಹಾಗೂ 12 ಜ್ಯೋತಿರ್ಲಿಂಗಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡ ಪ್ರಕಾಶ ಟೊಣ್ಣೆ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯವು ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಮೌಲ್ಯಯುತ ಶಿಕ್ಷಣ ನೀಡುವ ಸೇವಾ ಸಂಸ್ಥೆಯಾಗಿದೆ ಎಂದರು. ಉಪನ್ಯಾಸಕ ರಾಜಯೋಗಿ ಬ್ರಹ್ಮಕುಮಾರ ಪ್ರೊ. ಗಿರೀಶ್‌ ಮಾತನಾಡಿ, ನೈತಿಕತೆ, ವಿಶ್ವಭ್ರಾತೃತ್ವ, ಭಾರತೀಯ ಸನಾತನ ಮೌಲ್ಯಗಳ ಪುನಃಸ್ಥಾಪಿಸಬೇಕಿದೆ ಎಂದರು.

ಉದಗೀರ್‌ ನಗರ ಪರಿಷತ್‌ ಸದಸ್ಯ ನಾಗೇಶ್‌ ಅಷ್ಟೂರೆ, ಪ್ರೊ.ಎಸ್‌.ಎನ್‌ .ಶಿವಣಕರ್‌, ನೀಲ ಕಂಠರಾವ ಕಾಂಬಳೆ, ಶಿವರಾಜ ಬಿರಾದಾರ್‌, ಬಸವರಾಜ ಪಾಟೀಲ, ವೈಜಿನಾಥ ಗುಡ್ಡಾ, ಲಿಂಗಾನಂದ ಮಹಾಜನ್‌, ಬಿ.ಕೆ.ಜಯಶ್ರೀ ಬೆಹನಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.