ADVERTISEMENT

‘ವೈಯಕ್ತಿಕ ಸ್ವಚ್ಛತೆಯಿಂದ ರಾಷ್ಟ್ರದ ಶುಚಿತ್ವ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:49 IST
Last Updated 31 ಜನವರಿ 2017, 6:49 IST
‘ವೈಯಕ್ತಿಕ ಸ್ವಚ್ಛತೆಯಿಂದ ರಾಷ್ಟ್ರದ ಶುಚಿತ್ವ’
‘ವೈಯಕ್ತಿಕ ಸ್ವಚ್ಛತೆಯಿಂದ ರಾಷ್ಟ್ರದ ಶುಚಿತ್ವ’   
ಹುಮನಾಬಾದ್: ವೈಯಕ್ತಿಕ ಸ್ವಚ್ಛತೆಯಿಂದ ಇಡೀ ರಾಷ್ಟ್ರ ಶುಚಿಗೊಳ್ಳಲು ಸಾಧ್ಯ ಎಂದು ಹುಮನಾಬಾದ್ ಹಿರಿಯ ಸಿವಿಲ್‌ ನ್ಯಾಯಾಲಯ ನ್ಯಾಯಾಧೀಶ ರಾಜೇಶ ಎಂ.ಕಮತೆ ಹೇಳಿದರು.
 
ಹುತಾತ್ಮ ದಿನ ಮತ್ತು ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪುರಸಭೆ ಸಂಯುಕ್ತವಾಗಿ ಕೋರ್ಟ್‌ ಪ್ರಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ  ಅವರು ಮಾತನಾಡಿದರು. ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು  ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರೆ ಜನರೂ ಸ್ವಚ್ಛತೆ ಕಾಪಾಡಿಕೊಳ್ಳುತ್ತಾರೆಎಂದರು. 
 
ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಆಶೆಪ್ಪ ಬಿ.ಸಣ್ಮನಿ ಮಾತನಾಡಿ,ರಸ್ತೆಮಧ್ಯೆ ಕಸ ಚೆಲ್ಲದೆ, ತೊಟ್ಟಿಯಲ್ಲೇ ಎಸೆದರೆ ಸ್ವಚ್ಛತೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಅಶೋಕ ಸಜ್ಜನ್ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಶುದ್ಧ ಪರಿಸರ ಅತ್ಯಗತ್ಯ ಎಂದರು. 
 
ಪುರಸಭೆ ಮುಖ್ಯಾಧಿಕಾರಿ ಮೀನಾಕುಮಾರಿ ಬೋರಾಳ್ಕರ್‌  ಶುಚೀಕರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದರು. ಭೀಮರಾವ ಓಗತಿ, ಕಲ್ಯಾಣರಾವ ಪರಶೆಟ್ಟಿ, ಎಲ್‌.ವಿ.ನಂದಿ, ಮನೋಜಕುಮಾರ, ಕಪೀಲನಾಥ ಬಿರಾದಾರ, ವಿರೇಕಾ ಪಾಟೀಲ, ಕೆ.ಶ್ರೀಮಂತರಾವ, ಚನ್ನಪ್ಪ ಚಿತ್ತಕೋಟಾ  ಇದ್ದರು.  
 
**
ಸ್ವಚ್ಛತೆ ಅಭಿಯಾನ ತೋರಿಕೆ ಆಗಿರದೆ ಉದ್ದೇಶ ಪೂರ್ಣಗೊಳ್ಳುವಂತಾಗಬೇಕು. ಭಾಷಣ ಮಾಡುವ ವ್ಯಕ್ತಿಗಳೆಲ್ಲರೂ  ಬೀದಿಗಿಳಿದು ಸ್ವಚ್ಛತೆ ಕೈಗೊಂಡು ಮಾದರಿ ಆಗಬೇಕು
-ರಾಜೇಶ ಎಂ.ಕಮತೆ, ನ್ಯಾಯಾಧೀಶ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.