ADVERTISEMENT

‘ಸರ್ವ ಕಾಲಕ್ಕೂ ಕನಕದಾಸರ ನಿಲುವು ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:47 IST
Last Updated 7 ನವೆಂಬರ್ 2017, 5:47 IST

ಔರಾದ್: ‘ಕನಕದಾಸರ ವಿಚಾರಗಳು ವೈಜ್ಞಾನಿಕ ಮತ್ತು ವೈಚಾರಿಕತೆಯಿಂದ ಕೂಡಿವೆ. ಹಾಗಾಗಿ ಅವರ ನಿಲುವು ಸರ್ವಕಾಲಕ್ಕೂ ಪ್ರಸ್ತುತ’ ಎಂದು ಉಪನ್ಯಾಸಕಿ ಡಾ. ರೇಣುಕಾದೇವಿ ಸ್ವಾಮಿ ಹೇಳಿದರು. ತಾಲ್ಲೂಕು ಆಡಳಿತ ಇಲ್ಲಿಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಕುಡಿಯುವ ನೀರು, ನಡೆಯುವ ಭೂಮಿ, ಸೇವಿಸುವ ಗಾಳಿ ಎಲ್ಲವೂ ಒಂದೇ ಇರುವಾಗ ಯಾವ ಜಾತಿ ಮೇಲಲ್ಲ, ಯಾವ ಜಾತಿ ಕೀಳಲ್ಲ. ಮನುಷ್ಯನು ತನ್ನ ಸವಲತ್ತಿಗೆ ಅನುಸಾರವಾಗಿ ಜಾತಿ ಮಾಡಿಕೊಂಡನೇ ವಿನಃ ಹುಟ್ಟಿನಿಂದ ಯಾರೂ ಕೀಳಲ್ಲ. ವ್ಯಕ್ತಿಯನ್ನು ಗುಣದಿಂದ ಅಳೆಯಬೇಕೆ ಹೊರತು ಜಾತಿಯಿಂದಲ್ಲ’ ಎಂಬ ಹಲವು ನೀತಿಯನ್ನು ಜನರಿಗೆ ಬೋಧಿಸಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಶಾಸಕ ಪ್ರಭು ಚವಾಣ್, ‘ಮಹಾತ್ಮರ ವಿಚಾರಗಳು ಕೇವಲ ಹೇಳಿಕೆಗೆ ಸೀಮಿತ ವಾಗಬಾರದು. ಅವರ ಒಂದೊಂದು ವಿಚಾರಗಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತವೆ’ ಎಂದರು.

ADVERTISEMENT

‘ಅಭಿವೃದ್ಧಿ ನನ್ನ ಏಕೈಕ ಗುರಿಯಾಗಿದೆ. ಕೇಂದ್ರ ಸರ್ಕಾರ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ತಾಲ್ಲೂಕಿಗೆ ₹15 ಕೋಟಿ ಮಂಜೂರಾಗಿದೆ. ಇದ ರಿಂದ ಬೆಳಕು ವಂಚಿತ ಜನರಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾ ಚಿದ್ರಿ, ಅನಿಲ ಬಿರಾದಾರ, ಸುರೇಖಾ ಭೋಸ್ಲೆ, ಮೀನಾ ಮಾಣಿಕ್‌, ಸಂಧ್ಯಾರಾಣಿ ನರೋಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ನಿರ್ಮಳೆ, ತಾ. ಪಂ. ಉಪಾಧ್ಯಕ್ಷ ನೆಹರು ಪಾಟೀಲ, ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚವಾಣ್ ಶೆಟ್ಟಿ, ಶ್ರಾವಣಕುಮಾರ ಭಂಡೆ, ಸುರೇಶ ಭೋಸ್ಲೆ, ಶಿವಕುಮಾರ ಮೇತ್ರೆ ಇದ್ದರು. ತಹಶೀಲ್ದಾರ್ ಎಂ. ಚಂದ್ರಶೇಖರ್ ಸ್ವಾಗತಿಸಿದರು. ಬಾಲಾಜಿ ಅಮರವಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.