ADVERTISEMENT

ಸ್ವಚ್ಛತೆಗೆ ಕೈ ಜೋಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 5:47 IST
Last Updated 20 ಫೆಬ್ರುವರಿ 2017, 5:47 IST

ಭಾಲ್ಕಿ: ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಾ ಎಚ್. ಹೇಳಿದರು.

ತಾಲ್ಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಗಾಯಮುಖ ಕ್ಷೇತ್ರದಲ್ಲಿ ಶನಿವಾರ ಮಳಚಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಶಿಸ್ತಿನ ಜೀವನ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಉತ್ತಮ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ದೇಶವನ್ನು ಸ್ವಚ್ಛ, ಸುಂದರವಾಗಿ ಇರಿಸುವುದು ಪ್ರತಿ ನಾಗರಿಕರ ಕರ್ತವ್ಯ. ಸುಂದರ ಪರಿಸರ ಜನರನ್ನು ರೋಗಗಳಿಂದ ಮುಕ್ತವಾಗಿರಿಸುತ್ತದೆ ಎಂದು ಹೇಳಿದರು.

ಅಮರೇಶ್ವರ ಪಾಟೀಲ, ಶಿವರಾಜ ಪಾಟೀಲ, ಪ್ರಭುಲಿಂಗ ಸ್ವಾಮಿ, ಗೌರಿಶಂಕರ ಸ್ವಾಮಿ, ಲೋಕೇಶ ಧೋಬಿ, ಮಾಣಿಕರಾವ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.