ADVERTISEMENT

‘ಅಂಬೇಡ್ಕರ್‌ ಕನಸಿನ ಭಾರತ ನಿರ್ಮಿಸಿ’

ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದಿಂದ ಕಾರ್ಯಕರ್ತರ ಶಿಬಿರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 11:42 IST
Last Updated 23 ಜನವರಿ 2017, 11:42 IST

ಚಾಮರಾಜನಗರ: ‘ಡಾ.ಬಿ.ಆರ್. ಅಂಬೇಡ್ಕರ್‌ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸ ಬೇಕಿದೆ’ ಎಂದು ರಾಷ್ಟ್ರೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷ ವಾಗ್‌ಮೊರೆ ಹೇಳಿದರು.

ನಗರದ ಸಾರನಾಥ ಬುದ್ಧ ವಿಹಾರ ದಲ್ಲಿ ಭಾನುವಾರ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆಯಿಂದ ನಡೆದ ಕಾರ್ಯಕರ್ತರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಬುದ್ಧ ವಿಹಾರ ಹಾಗೂ ಅಂಬೇಡ್ಕರ್‌ ಅವರ ಪ್ರತಿಮೆ ಸ್ಥಾಪಿಸಬೇಕು. ದೇಶದೆಲ್ಲೆಡೆ ಅಂಬೇಡ್ಕರ್‌ ಹಾಗೂ ಭಗವಾನ್ ಬುದ್ಧರ ಜೀವನ ಚರಿತ್ರೆ ಪ್ರಚಾರ ಮಾಡುವುದೇ ಭಾರತೀಯ ಬೌದ್ಧ ಮಹಾಸಭಾದ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ 1991ರ ಜನಗಣತಿ ಪ್ರಕಾರ 71 ಲಕ್ಷ ಬೌದ್ಧರಿ ದ್ದಾರೆ. ಅವರು ದೇಶ, ವಿದೇಶಗಳಲ್ಲಿ ಅಂಬೇಡ್ಕರ್ ಮತ್ತು ಬುದ್ಧರ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ಬೌದ್ಧಧರ್ಮಕ್ಕೆ ಮತಾಂತರ ಹೊಂದಿ ದ್ದರೆ ಅವರ ಬಗ್ಗೆ ನಿಯಾಮನುಸಾರವಾಗಿ ಪರಿಶೀಲಿಸಿ ಅವರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ವಿತರಿಸಬೇಕು ಎಂದು ತಹಶೀಲ್ದಾರ್‌ಗಳಿಗೆ ಸರ್ಕಾರ ನಿರ್ದೇಶನ ನೀಡಿದೆ ಎಂದರು.

ಬಿಎಸ್ಐ ಪದಾಧಿಕಾರಿಗಳು ಬೌದ್ಧ ಪಠಣ ಮಾಡಿದರು. ಸೋಮಣ್ಣ, ಮಹದೇವಸ್ವಾಮಿ ಹಣಕಾಸು ಅಭಿವೃದ್ಧಿ ಬಗ್ಗೆ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ನಳಂದ ಬೌದ್ಧ ವಿಹಾರದ ಕಾರ್ಯದರ್ಶಿ ಬೋಧಿದತ್ತ ಬಂತೇಜಿ, ನಗರಸಭೆ ಸದಸ್ಯ ಎಸ್. ನಂಜುಂಡಸ್ವಾಮಿ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆ ಅಧ್ಯಕ್ಷ ಆರ್.ಬಸವರಾಜು, ಪ್ರಧಾನ ಕಾರ್ಯ ದರ್ಶಿ ನಂಜುಂಡಯ್ಯ, ಖಜಾಂಚಿ ಸೋಮಣ್ಣ, ತಾಲ್ಲೂಕು ಅಧ್ಯಕ್ಷ ಸಿದ್ದ ರಾಜು, ಕಾರ್ಯದರ್ಶಿ ಮಧುಸೂದನ್, ಉಪಾಧ್ಯಕ್ಷ ಶ್ರೀನಿವಾಸ, ವಕೀಲರಾದ ನಾಗಲಕ್ಷ್ಮಿ, ಮುಖಂಡರಾದ ಪುಟ್ಟ ಸ್ವಾಮಿ, ಆರ್.ಮಹದೇವಯ್ಯ, ಮರಿ ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.