ADVERTISEMENT

ಕಾನೂನಿನ ಅರಿವು ಅಗತ್ಯ: ಚಿನ್ನಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 11:45 IST
Last Updated 4 ಮಾರ್ಚ್ 2015, 11:45 IST

ಸಂತೇಮರಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಇಲಾಖೆ ವತಿಯಿಂದ ಮಂಗಳವಾರ ನಡೆದ ಅತ್ಯಾಚಾರ ಮತ್ತು ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸಿ ಕಾರ್ಯಕ್ರಮ ನಡೆಯಿತು.

ವಕೀಲ ಚಿನ್ನಸ್ವಾಮಿ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯಕತೆ ಇದೆ. ಶಿಕ್ಷಣದಿಂದ ವಂಚಿತರಾಗಿರುವ ಮಹಿಳೆಯರಿಗೆ ಕಾನೂನಿನ ಅರಿವು ಇಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕಾಗಿದೆ. ಬಾಲ್ಯ ವಿವಾಹದಿಂದ ಅಪೌಷ್ಟಿಕತೆ ಮಕ್ಕಳು ಹುಟ್ಟುತ್ತವೆ.

ದನ್ನು ತಡೆಯಲು ಮಹಿಳೆಯರು ಹೋರಾಟ ಮಾಡಬೇಕು. ಭ್ರೂಣ ಹತ್ಯೆಗೆ ವೈದ್ಯರು ಕಾರಣರಾಗುತ್ತಾರೆ. ಭ್ರೂಣ ಹತ್ಯೆಯನ್ನು ಮಹಿಳೆ ಮತ್ತು ಪುರುಷ ಹೊಂದಾಣಿಕೆಯಿಂದ ತಡೆಗಟ್ಟ­ಬಹುದು.

ವರದಕ್ಷಿಣೆ ಪಡೆಯುವುದು ತೆಗೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಿಳಿಸಿದರು. ವಕೀಲರಾದ ಪುಟ್ಟಸ್ವಾಮಿ, ರೂಪಶ್ರೀ, ಸೌಮ್ಯಾ, ಅರುಣ್ , ಪಿಡಿಒ ಶಿವಕುಮಾರ್, ಎಚ್.ಎಂ. ಮಹದೇವಯ್ಯ, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.