ADVERTISEMENT

ಖಾಸಗಿ ಸಂಸ್ಥೆಯಿಂದ ಜಾನುವಾರುಗಳಿಗೆ ಮೇವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 11:16 IST
Last Updated 7 ಏಪ್ರಿಲ್ 2017, 11:16 IST
ಜಾನುವಾರುಗಳಿಗಾಗಿ ಜ್ಞಾನ ಫೌಂಡೇಷನ್ ಸಂಸ್ಥೆ ನೀಡಿರುವ ಒಣ ಹುಲ್ಲು ನೀಡುವ ಶೇಖರಣೆ ಮಾಡುತ್ತಿರುವ ಗ್ರಾಮಸ್ಥರು.
ಜಾನುವಾರುಗಳಿಗಾಗಿ ಜ್ಞಾನ ಫೌಂಡೇಷನ್ ಸಂಸ್ಥೆ ನೀಡಿರುವ ಒಣ ಹುಲ್ಲು ನೀಡುವ ಶೇಖರಣೆ ಮಾಡುತ್ತಿರುವ ಗ್ರಾಮಸ್ಥರು.   

ಮಲೆ ಮಹದೇಶ್ವರ ಬೆಟ್ಟ: ಖಾಸಗಿ ಜ್ಞಾನ ಫೌಂಡೇಷನ್ ಸಂಸ್ಥೆಯು ಈ ಭಾಗದ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳಿಗೆ ಹಸಿ ಮತ್ತು ಒಣ ಹುಲ್ಲು ಒದಗಿಸುವ ಮೂಲಕ ಗಮನಸೆಳೆದಿದೆ. ಮಲೆ ಮಹದೇಶ್ವರ ಬೆಟ್ಟ ಹಾಗೂ ಸುತ್ತ ಮುತ್ತಲ ಗ್ರಾಮಗಳಾದ ವಡಕೆ ಹಳ್ಳ, ಕೊಂಬುಡಿಕ್ಕಿ, ಹಳೆಯೂರು ಇನ್ನಿತರ ಗ್ರಾಮಗಳಲ್ಲಿ ಜಾನುವಾರುಗಳ ಮೇವಿನ ಸಮಸ್ಯೆ ಈ ಮೂಲಕ ಸ್ವಲ್ಪಮಟ್ಟಿಗೆ ಬಗೆಹರಿದಿದೆ.

ಕೊಂಬುಡಿಕ್ಕಿ, ಹಾಗೂ ವಡಕೆಹಳ್ಳ ಗ್ರಾಮಗಳಲ್ಲಿ ಸುಮಾರು ನೂರಾರು ರಾಸುಗಳಿದ್ದು, ಪಸು ಸಂಗೋಪನೆ ಇಲಾಖೆ ಮೂಲಕ ಅಗತ್ಯ ಪ್ರಮಾಣದ ಮೇವು ಲಭ್ಯವಾಗುತ್ತಿರಲಿಲ್ಲ. ಇದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ದೆಹಲಿಯ ಜ್ಞಾನ ಫೌಂಡೇಷನ್‌ ಸಂಸ್ಥೆಯು ಕಳೆದ 15 ದಿನಗಳಿಂದ ಕಾಳಿ ದೊಡ್ಡಿ, ಗಾನಿಗ ಮಂಗಲ, ಕೊಂಬು ಡಿಕ್ಕಿ, ವಡಕೆ ಹಳ್ಳ, ಮತ್ತು ಎಂ.ಎಸ್. ದೊಡ್ಡಿಗಳಲ್ಲಿರುವ ಪಶುಗಳಿಗೆ ನಿತ್ಯ 40 ರಿಂದ 50 ಟನ್‌ ಹಸಿ ಹಾಗೂ ಒಣ ಮೇವು ಒದಗಿಸುತ್ತಿದೆ.

ADVERTISEMENT

ವಡಕೆಹಳ್ಳ ಕೋಣನಕೆರೆ ಹಾಗೂ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಗೆ ಅನ್ವ ಯಿಸಿ ವಡಕೆಹಳ್ಳ ಗ್ರಾಮದಲ್ಲಿ ಗೋಶಾಲೆ ತೆರೆಯಬೇಕು ಎಂಬ ಬೇಡಿಕೆ ಇತ್ತು. ಆದರೆ, ಇದಕ್ಕೆ ಅಧಿಕಾರಿಗಳಿಂದ ಸ್ಪಂದನೆ ದೊರೆತಿರಲಿಲ್ಲ.

ಸರ್ಕಾರ ಇನ್ನಾದರೂ ಈ ಭಾಗ ದಲ್ಲಿನ ಮೇವು ಸಮಸ್ಯೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರಾದ ಮಹದೇವ ಸ್ವಾಮಿ, ಕುಮಾರ, ಮಾದತಂಭಡಿ ತಿಳಿಸಿದ್ದಾರೆ.

ಜ್ಞಾನ ಫೌಂಡೇಷನ್‌ನ ಪ್ರತಿನಿಧಿಗಳು ಮೊದಲಿಗೆ ದಂಟಳ್ಳಿ ಗ್ರಾಮದಲ್ಲಿ ಮೇವು ವಿತರಣೆಗೆ ಚಾಲನೆ ನೀಡಿದರು. ಸಂಸ್ಥೆಯ ಕೌಶಿಕ್‌, ಕವಿತಾ, ಜೋಷಿಯಾ, ಗೌತಮ್ ಅವರಿಂದ ತಂಡ ಸಮಸ್ಯೆಯಿರುವ ಗ್ರಾಮಗಳನ್ನು ಗುರುತಿಸಿ ನೆರವಿಗೆ ಮುಂದಾಯಿತು.

ಪ್ರತಿ ದಿನ ಸುಮಾರು 40 ರಿಂದ 50 ಟನ್‌ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.