ADVERTISEMENT

ಬಾಪೂಜಿ ಸೇವಾ ಕೇಂದ್ರ ಆರಂಭ ನಾಳೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 11:23 IST
Last Updated 29 ಜುಲೈ 2016, 11:23 IST

ಚಾಮರಾಜನಗರ: ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಲ್ಲಿ ಜುಲೈ 30ರಿಂದ ಬಾಪೂಜಿ ಸೇವಾ ಕೇಂದ್ರಗಳು ವಿಧ್ಯುಕ್ತ ವಾಗಿ ಕಾರ್ಯಾರಂಭ ಮಾಡಲಿವೆ.
ಪ್ರಾಥಮಿಕ ಹಂತದಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ 43 ಸೇವೆ, ಕಂದಾಯ ಇಲಾಖೆಯ 40 ಸೇವೆ, ಇತರೇ 17 ಸೇವೆಗಳು ಗ್ರಾಮ ಪಂಚಾಯಿತಿಯಲ್ಲಿ ನಾಗರಿಕರಿಗೆ ಲಭಿಸಲಿವೆ. ಜತೆಗೆ, ಈ ಕೇಂದ್ರದ ಮೂಲಕವೇ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳು ಮತ್ತು ವಿವಿಧ ಪ್ರಮಾಣ ಪತ್ರ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಮತ್ತು ಕೃಷಿ ಚಟುವಟಿಕೆಗಳಿಗೆ ವಿವಿಧ ಇಲಾಖೆಯಿಂದ ಹಲವು ದಾಖಲಾತಿ ಪಡೆಯುವ ಅಗತ್ಯವಿದೆ. ಹಾಗಾಗಿ, ಒಂದೇ ಸೂರಿನಡಿ ಪಂಚಾಯಿತಿಗಳಲ್ಲಿ ಸೇವೆ ಒದಗಿಸಲು ಈ ಬಾಪೂಜಿ ಸೇವಾ ಕೇಂದ್ರ ಆರಂಭಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಬಿ. ರಾಮು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯಿತಿಯ ಪಂಚತಂತ್ರ ತಂತ್ರಾಂಶದೊಂದಿಗೆ ನಾಡ ಕಚೇರಿಯ ಭೂಮಿ ತಂತ್ರಾಂಶವನ್ನು ಒಗ್ಗೂಡಿಸ ಲಾಗಿದೆ. ಹಾಗಾಗಿ, ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ವಿತರಿಸು ತ್ತಿರುವ ಕಂದಾಯ ಇಲಾಖೆಯ 39 ಸೇವೆ ಸೇರಿದಂತೆ ಪಹಣಿಗಳು ಗ್ರಾಮ ಪಂಚಾ ಯಿತಿ ತಂತ್ರಾಂಶದಲ್ಲಿ ಲಭ್ಯವಾಗುವಂತೆ ಕ್ರಮವಹಿಸಲಾಗಿದೆ ಎಂದರು.

ನಾಗರಿಕರು ಪಂಚಾಯಿತಿ ಕಚೇರಿ ಯಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ, ಆರ್‌ಟಿಸಿ ಸೇರಿದಂತೆ ಕಂದಾಯ ಇಲಾಖೆಯ ದಾಖಲೆ ಪಡೆದುಕೊಳ್ಳ ಬಹುದು. ಸೇವೆ ಪಡೆಯಲು ನಿಗದಿತ ಶುಲ್ಕ ಪಾವತಿಸಬೇಕು ಎಂದರು.

ಈ ಹಿಂದೆ ಹೋಬಳಿ ಕೇಂದ್ರದಲ್ಲಿ ಮಾತ್ರವೇ ಸೇವೆ ಲಭಿಸುತ್ತಿತ್ತು. ಹೋಬಳಿ ವ್ಯಾಪ್ತಿಯ 7 ಗ್ರಾಮ ಪಂಚಾಯಿತಿಗಳ ಗ್ರಾಮಸ್ಥರು ಒಂದೇ ಕೇಂದ್ರದಲ್ಲಿಯೇ ಸೇವೆ ಪಡೆಯಬೇಕಿತ್ತು. ಇದರಿಂದ ತೊಂದರೆಯಾಗುತ್ತಿತ್ತು. ಈಗ ಪಂಚಾಯಿತಿ ಮಟ್ಟಕ್ಕೂ ಸೇವೆ ವಿಸ್ತರಣೆ ಗೊಂಡಿದೆ. ಜನರು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜುಲೈ 30ರಂದು ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಶಾಸಕರು, ಇತರೇ ಜನಪ್ರತಿ ನಿಧಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮದ ಬಳಿಕ ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ. ಜಿಲ್ಲೆಯ ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಅಂಗವಿಕಲರ ತಪಾಸಣೆ: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ‘ಕೇಂದ್ರ ಸರ್ಕಾರಿ ಸ್ವಾಮ್ಯದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಇನ್‌ ಸ್ಟಿಟ್ಯೂಟ್ ಫಾರ್ ದಿ ಫಿಸಿಕಲಿ ಹ್ಯಾಂಡಿ ಕ್ಯಾಪ್ಡ್‌ ಸಂಸ್ಥೆಯ 10 ತಜ್ಞ ವೈದ್ಯರ ತಂಡದಿಂದ ಜಿಲ್ಲೆಯಲ್ಲಿ ಅಂಗವಿಕಲರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜುಲೈ 29ರಂದು ಗುಂಡ್ಲುಪೇಟೆ ಪಟ್ಟಣದ ಡಿಬಿಜಿಜೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಜುಲೈ 30ರಂದು ಜಿಲ್ಲಾ ಕೇಂದ್ರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಆವರಣದಲ್ಲಿ ಶಿಬಿರ ನಡೆಯಲಿದೆ. ದೆಹಲಿ, ಹೈದರಾಬಾದ್ ಮತ್ತು ಚೆನ್ನೈ ನಿಂದ ತಜ್ಞರು ಆಗಮಿಸಿದ್ದಾರೆ. ದೈಹಿಕ ವಿಕಲತೆ, ದೃಷ್ಟಿದೋಷ, ಬುದ್ಧಿಮಾಂದ್ಯ ಸೇರಿದಂತೆ ಇತರೇ ವಿಕಲತೆ ಇರುವವರು ಶಿಬಿರಕ್ಕೆ ಹಾಜರಾಗಿ ಆರೋಗ್ಯ ಸಂಬಂಧಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.