ADVERTISEMENT

ಬಿಳಿಗಿರಿರಂಗನ ಚಿಕ್ಕಜಾತ್ರೆಗೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 10:09 IST
Last Updated 11 ಜನವರಿ 2017, 10:09 IST

ಯಳಂದೂರು: ಜ.15 ರಂದು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಸಂಕ್ರಾಂತಿ ಜಾತ್ರೆ ನಡೆಯಲಿದ್ದು, ಸಿದ್ಧತೆ ಕುರಿತು ಮಂಗಳವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ನಡೆಯಿತು.

ಜಾತ್ರೆ ಕೇವಲ 4 ದಿನ ಇರುವಾಗ ಪೂರ್ವಬಾವಿ ಸಭೆ ನಡೆಸುತ್ತಿರುವ ಕ್ರಮಕ್ಕೆ  ಸಭೆಯಲ್ಲಿ ಹಾಜರಿದ್ದ ತಾ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ದೇಗುಲದ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ತಾಪಂ ಸದಸ್ಯ ವೈ.ಕೆ. ಮೋಳೆ ನಾಗರಾಜು, ಪ.ಪಂ. ಉಪಾಧ್ಯಕ್ಷ ಭೀಮಪ್ಪ, ಎನ್. ದೊರೆಸ್ವಾಮಿ ದೂರಿದರು.

ಜಾತ್ರೆಯಲ್ಲಿ ಪಶು ಆಸ್ಪತ್ರೆ ಮುಂಭಾಗ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಕುಡಿವ ನೀರಿನ ಪೂರೈಕೆಗೆ ಒತ್ತುನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಬೆಟ್ಟಕ್ಕೆ ಲಾರಿ, ತ್ರಿಚಕ್ರ ವಾಹನ, ಸರಕು ಸಾಗಣೆ ವಾಹನಗಳಲ್ಲಿ ಜನಸಾಗಣೆಗೆ ಸಾಗಿಸಲು ಅವಕಾಶ  ಇಲ್ಲ. 14 ರ ಸಂಜೆವರೆಗೆ ಬಸ್ಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದು ಅರಣ್ಯ ಇಲಾಖೆಯ ಎಸಿಎಫ್ ನಾಗರಾಜು ಸಭೆಗೆ ತಿಳಿಸಿದರು.

ಕೆಎಸ್‌ಆರ್‌ಟಿಸಿ 60 ಬಸ್‌ಗಳ ಸಂಚಾರ ಕಲ್ಪಿಸಲಿದೆ. ಪಟ್ಟಣದ ನಾಡಮೇಗಲಮ್ಮನ ದೇಗುಲ ಆವರಣದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಆಗಲಿದೆ. ಸರತಿ ಸಾಲಿಗಾಗಿ ಬ್ಯಾರಿಕಡ್‌ ಅಳವಡಿಸಲು  ತೀರ್ಮಾನಿಸಲಾಯಿತು.

ದೇವಸ್ಥಾನಕ್ಕೆ ಮಹಾರಾಜರು ನೀಡಿರುವ ಒಡವೆಗಳ ಮೌಲ್ಯಮಾಪನ ಮಾಡಿಸಿ, ಬಳಿಕ ಅರ್ಚಕರಿಗೆ ಒಪ್ಪಿಸಬೇಕು ಎಂದು ದೇಗುಲದ ಇಒ ವೆಂಕಟೇಶ್ ಪ್ರಸಾದ್ ಹೇಳಿದರು.
ಜಿ.ಪಂ. ಸದಸ್ಯ ಜೆ. ಯೋಗೇಶ್, ತಾ.ಪಂ. ಅಧ್ಯಕ್ಷ ನಂಜುಂಡಯ್ಯ, ಸದಸ್ಯ ವೈ.ಕೆ. ಮೋಳೆನಾಗರಾಜು, ಪ.ಪಂ. ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ, ಗ್ರಾ.ಪಂ. ಅಧ್ಯಕ್ಷೆ ಸುಮತಿ, ಸುರೇಶ್, ತಹಶೀಲ್ದಾರ್ ಕೆ. ಚಂದ್ರಮೌಳಿ, ಇಒ ಡಾ. ಪ್ರೇಮ್‌ಕುಮಾರ್, ಸಿಪಿಐ ಶಿವಸ್ವಾಮಿ, ಪಿಎಸ್ಐ ಮಂಜು, ಅರ್ಚಕರಾದ ರವಿ, ನಾಗರಾಜಭಟ್ಟ, ರಾಜು, ಶೇಷಾದ್ರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.