ADVERTISEMENT

ಮಳೆ ನೀರು: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:08 IST
Last Updated 8 ಸೆಪ್ಟೆಂಬರ್ 2017, 7:08 IST

ಕೊಳ್ಳೇಗಾಲ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ 2ನೇ ಕ್ರಿಶ್ಚಿಯನ್ ಬೀದಿ ಸಂಪೂರ್ಣ ಜಲಾವೃತಗೊಂಡು ವಯೋವೃದ್ಧರು ಮಹಿಳೆಯರು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.

ಈ ಬೀದಿಯಲ್ಲಿ ಹಳ್ಳಕೊಳ್ಳಗಳಿದ್ದು ರಸ್ತೆ ಹಾಗೂ ಮರಡಿಗುಡ್ಡದ ಕಡೆಯಿಂದ ನೀರು ಹರಿದು ಬಂದು ಸಂಪೂರ್ಣ ಜಲಾವೃತಗೊಂಡಿದೆ. ಈ ನೀರು ಹೊರಹೋಗಲು ವ್ಯವಸ್ಥೆ ಇಲ್ಲದ ಕಾರಣ 2 ದಿನಗಳಿಂದ ಇಲ್ಲಿನ ನಿವಾಸಿಗಳು ಹೊರಬರಲಾಗದೆ ಪರದಾಡುವಂತಾಗಿದೆ.

‘ಬಡಾವಣೆಯಲ್ಲಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಹಿಳೆಯರೂ ಸಹ ಹೊರಗೆ ಬರಲಾಗುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು’ ಎಂದು ನಿವಾಸಿ ರತ್ನ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.