ADVERTISEMENT

ಮಹಾದಾಯಿ ತೀರ್ಪು; ತೀವ್ರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 11:26 IST
Last Updated 29 ಜುಲೈ 2016, 11:26 IST

ಚಾಮರಾಜನಗರ: ಮಹಾದಾಯಿ ನ್ಯಾಯಮಂಡಳಿ ರಾಜ್ಯದ ಮಧ್ಯಂತರ ಆದೇಶದ ಅರ್ಜಿ ವಜಾಗೊಳಿಸಿರು ವುದನ್ನು ಖಂಡಿಸಿ ನಗರದಲ್ಲಿ ಗುರುವಾರ ವಿವಿಧ ಸಂಘಟನೆ ಮತ್ತು ರಾಜಕೀಯ ಪಕ್ಷಗಳಿಂದ ಪ್ರತಿಭಟನೆ ನಡೆಯಿತು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ, ಬಹುಜನ ಸಮಾಜ ಪಕ್ಷ, ಕರ್ನಾಟಕ ಸೇನಾ ಪಡೆ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಪ್ರತಿಭಟನೆ: ಮಹಾದಾಯಿ ನೀರು ಹಂಚಿಕೆ ಸಂಬಂಧ ರಾಜ್ಯ ಸರ್ಕಾ ರದ ಅರ್ಜಿ ವಜಾಗೊಳಿಸುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡ ಲಾಗಿದೆ ಎಂದು ದೂರಿ ಭುವನೇಶ್ವರಿ ವೃತ್ತದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಬಿ. ರಾಮು ಅವರ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ನೆರೆಯ ರಾಜ್ಯಗಳ ನಿರ್ಲಕ್ಷ್ಯದ ಧೋರಣೆಯಿಂದ ನೀರಿನ ಸಮಸ್ಯೆ ಎದು ರಾಗಿದೆ. ಕೂಡಲೇ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯಯುತ ವಾಗಿ ಕ್ರಮಕೈಗೊಳ್ಳಬೇಕು ಎಂದರು.

ರೈತ ಸಂಘದ ವರಿಷ್ಠ ಮಂಡಳಿ ಸದಸ್ಯ ಎ.ಎಂ. ಮಹೇಶ್‌ಪ್ರಭು, ರೈತ ಮುಖಂಡರಾದ ಕಾಳನಹುಂಡಿ ಗುರು ಸ್ವಾಮಿ, ಸಿದ್ದರಾಜು, ಬಹುಜನ ಸಮಾಜ ಪಕ್ಷ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌, ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ನಗರಸಭೆ ಸದಸ್ಯ ಸಿ.ಎಸ್‌. ಸೈಯದ್‌ ಆರೀಫ್‌, ಮುಖಂಡರಾದ ಗೋವಿಂದರಾಜು, ಸಿ.ಎಂ. ಕೃಷ್ಣಮೂರ್ತಿ, ಪಿ.ಸಿ. ಸಿದ್ದರಾಜು, ಬಸವಣ್ಣ ಹಾಜರಿದ್ದರು.

ಕರ್ನಾಟಕ ಸೇನಾ ಪಡೆ: ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ರಸ್ತೆ ತಡೆ ನಡೆಸಿದರು.
ರಾಜ್ಯಸರ್ಕಾರದ ನಿರ್ಲಕ್ಷ್ಯದಿಂದ ಇಂಥಹ ತೀರ್ಪು ಪ್ರಕಟವಾಗಿದೆ. ಕೂಡಲೇ, ಸರ್ವಪಕ್ಷದ ಮುಖಂಡ ರೊಂದಿಗೆ ಚರ್ಚಿಸಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.

ಮಧ್ಯಂತರ ತೀರ್ಪು ಖಂಡಿಸಿ ರೈತರು ಹಾಗೂ ಕನ್ನಡಪರ ಸಂಘಟನೆ ಗಳು ಜುಲೈ 30ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ಜನರು ಬೆಂಬಲ ನೀಡಬೇಕು ಎಂದರು.

ಮುಖಂಡರಾದ ಚಾ.ರಂ.ಶ್ರೀನಿವಾಸ ಗೌಡ, ಚಾ.ವೆಂ. ರಾಜಗೋಪಾಲ್‌, ಚಾ.ಗು. ನಾಗರಾಜು, ಹ.ವಿ.ನಟರಾಜು,  ಪ್ರವೀಣ್‌ಶೆಟ್ಟಿ, ಕಂಡಕ್ಟರ್‌ ಸೋಮನಾಯಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.