ADVERTISEMENT

ಮೂಲಭೂತ ಕರ್ತವ್ಯದ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 7:15 IST
Last Updated 2 ಅಕ್ಟೋಬರ್ 2014, 7:15 IST

ಕೊಳ್ಳೇಗಾಲ: ‘ಪರಿಸರ ಸಂರಕ್ಷಣೆ, ಸರ್ಕಾರಿ ಆಸ್ತಿ ರಕ್ಷಣೆ ಸೇರಿದಂತೆ ಇತರೆ ಮೂಲಭೂತ ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳು ಅರಿವನ್ನು ಹೊಂದಬೇಕು’ ಎಂದು ಸರ್ಕಾರಿ ವಕೀಲ ನಾಗೇಶ್‌ ತಿಳಿಸಿದರು.

ಸಂತ ಅಸಿಸ್ಸಿ ಪ್ರೌಢಶಾಲೆ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ರೋಟರಿ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಅಖಿಲ ಕರ್ನಾಟಕ ಜನಜಾಗೃತಿ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಮೂಲಭೂತ ಕರ್ತವ್ಯಗಳು ಹಾಗೂ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸಿಸ್ಸಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ರೋಸ್‌ಕಮಲ ಕುಮಾರಿ ವಹಿಸಿ ವಿದ್ಯಾರ್ಥಿಗಳು ಕಾನೂನು ಅರಿವು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಪಡೆದುಕೊಳ್ಳಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಬಹುಮಾನ ವಿತರಣೆ:  ಮೂಲಭೂತ ಕರ್ತವ್ಯಗಳ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವರ್ಷಿಣಿ, ದ್ವಿತೀಯ ಬಹುಮಾನ ಪಡೆದ ಕೃತಿಕಾ, ತೃತೀಯ ಬಹುಮಾನ ಪಡೆದ ಸ್ನೇಹ ಅವರಿಗೆ ಬಹುಮಾನ ವಿತರಿಸಲಾಯಿತು.
ದರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಮೇಲ್ವಿಚಾರಕ ಪ್ರದೀಪ್‌, ಶಿಕ್ಷಕ ರಾಕೇಶ್‌, ಸುಬ್ರಹ್ಮಣ್ಯಂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.