ADVERTISEMENT

ರಾಷ್ಟ್ರೀಯ ಹೆದ್ದಾರಿ ಬದಿ ವ್ಯಾಪಾರ; ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 6:41 IST
Last Updated 12 ಏಪ್ರಿಲ್ 2017, 6:41 IST
ರಾಷ್ಟ್ರೀಯ ಹೆದ್ದಾರಿ ಬದಿ ವ್ಯಾಪಾರ; ಸಂಚಾರಕ್ಕೆ ಅಡಚಣೆ
ರಾಷ್ಟ್ರೀಯ ಹೆದ್ದಾರಿ ಬದಿ ವ್ಯಾಪಾರ; ಸಂಚಾರಕ್ಕೆ ಅಡಚಣೆ   

ಸಂತೇಮರಹಳ್ಳಿ: ಪ್ರತಿ ಮಂಗಳವಾರದ ಸಂತೆಯಲ್ಲಿ ವ್ಯಾಪಾರಸ್ಥರು ಸಂತೆ ನಡೆಯುವ ಮುಂಭಾಗ ವ್ಯಾಪಾರ ನಡೆಸುತ್ತಿರುವ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಗೆ ಒಳಪಡುವ ಈ ಉಪ ಮಾರುಕಟ್ಟೆ ೨೫ ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ತರಕಾರಿ, ದಿನಸಿ ವಸ್ತುಗಳು ಸೇರಿದಂತೆ ಜಾನುವಾರಗಳ ಮಾರಾಟವು ನಡೆಯುತ್ತಿದೆ.

ಆದರೆ, ಕೆಲ ವ್ಯಾಪಾಸ್ಥರು ಸಂತೆಯ ಒಳ ಪ್ರಾಂಗಣದಲ್ಲಿ ಸ್ಥಳಾವಕಾಶ ಇದ್ದರೂ ವ್ಯಾಪಾರ ನಡೆಸುತ್ತಿಲ್ಲ. ಬದ ಲಿಗೆ ಸಂತೆಯ ಗೇಟ್‌ಬಳಿಯಿಂದ ಬಸ್ ನಿಲ್ದಾಣದವರೆಗೆ ವ್ಯಾಪಾರಸ್ಥರು ರಸ್ತೆಯ ಉದ್ದಗಲಕ್ಕೆ ವ್ಯಾಪಾರ ನಡೆಸುತ್ತಿದ್ದಾರೆ.

ಇದರಿಂದ ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗು ತ್ತಿದೆ. ಸಂತೇಮರಹಳ್ಳಿಯಿಂದ ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಹೋಗುವ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ.ಈ ರಸ್ತೆಯಲ್ಲಿ ಎರಡು ಕಡೆಗಳಿಂದ ಹೆಚ್ಚು ವಾಹನಗಳು ಚಲಿಸುತ್ತಿರುವುದ ರಿಂದ ದ್ವಿ ಚಕ್ರ ಸವಾರರು ಹಾಗೂ ಸಂತೆಗೆ ಬರುವ ಜನರಿಗೂ ತೊಂದರೆ ಯಾಗುತ್ತಿದೆ.

ADVERTISEMENT

ಕುರಿ, ಮೇಕೆ ಹಾಗೂ ಜಾನುವಾರು ಗಳ ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳವಿದ್ದರೂ ರಸ್ತೆಯಲ್ಲಿ ವ್ಯಾಪಾರ ನಡೆಯುತ್ತಿದೆ. ಸಂತೆ ಎದುರಿಗೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಶಾಖಾ ಕಚೇರಿ ಇದೆ. ಬ್ಯಾಂಕ್‌ ಎದುರು ವಾಹನಗಳನ್ನು ನಿಲ್ಲಿ ಸಲು ತೊಂದರೆಯಾಗುತ್ತಿದೆ.ಸಮೀಪದಲ್ಲಿಯೇ ಪೆಟ್ರೋಲ್ ಬಂಕ್  ಇರುವುದು ವಾಹನಗಳ ಸಂಚಾರ ದಟ್ಟಣೆ ಹೆಚ್ಚಲು ಕಾರಣ ವಾಗಿದೆ.

ಈ ಸಮಸ್ಯೆ ಕುರಿತು  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋ ಜನವಾಗಿಲ್ಲ ಎಂದು ಸಂತೆಗೆ ಬರುವ ಸಾರ್ವಜನಿಕರು ದೂರುತ್ತಾರೆ.ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸು ವವರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡ ಬೇಕು ಎಂದು ವ್ಯಾಪರಸ್ಥರಾದ ಮಹದೇವಪ್ರಕಾಶ್ ಹಾಗೂ ಮಹದೇವ ಸ್ವಾಮಿ ಎಪಿಎಂಸಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

‘ಸ್ಥಳ ಪರಿಶೀಲನೆ ನಡೆಸಿದ್ದೇವೆ. ವ್ಯಾಪಾರಿಗಳಿಗೆ ನೋಟಿಸ್ ನೀಡಿ ಸಭೆ ಹರಾಜು ಮಾರುಕಟ್ಟೆಯಲ್ಲಿ ವಹಿವಾಟಿಗೆ ಸೂಚಿಸುತ್ತೇವೆ. ಮುಂದಿನ ವಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿ ಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.