ADVERTISEMENT

ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾದ ಸ್ಪರ್ಧೆ

ಕಣ್ಣೂರು; ‘ಲಿಯೋ ನಾರ್ಡೋ ಡಾ ವಿಂಚಿ’ ಸ್ಪರ್ಧಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:38 IST
Last Updated 11 ಮಾರ್ಚ್ 2017, 7:38 IST
ಹನೂರು:  ಸಮೀಪದ ಕಣ್ಣೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ನಡೆದ ‘ಲಿಯೋ ನಾರ್ಡೋ ಡಾ ವಿಂಚಿ’ ಸ್ಪರ್ಧಾ ಕಾರ್ಯಕ್ರಮ ವಿದ್ಯಾರ್ಥಿ ಗಳ ಪ್ರತಿಭೆ ಹೊರತರುವಲ್ಲಿ ಸಾಕ್ಷಿಯಾಯಿತು.
 
ಪುಸ್ತಕ ಬಹು ದೂರದ ಕನಸಿನ ಕ್ಷೇತ್ರ ಸೇರಲು ಮಾರ್ಗವಾಗಲಿ  ಎಂಬ ಗುರಿಯಿಂದ ಆಶ್ರಯ ಫೌಂಡೇಶನ್ ಪ್ರತಿ ವರ್ಷ ಲಿಯೋ ನಾರ್ಡೋ ಡ ವಿಂಚಿ ಎಂಬ ಸ್ಪರ್ಧಾ  ಕಾರ್ಯಕ್ರಮ ನಡೆಸಲಿದೆ.
 
ಈ ಬಾರಿ ಹನೂರು ಶೈಕ್ಷಣಿಕ ವಲಯದ ಕಣ್ಣೂರಿನ ಸರ್ಕಾರಿ ಉನ್ನತೀ ಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 2016-17ನೇ ಸಾಲಿನ ಅರಿವಿನ ಅರಮನೆ ಗ್ರಂಥಾಲಗಳನ್ನೊಳಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆಯಿತು.
 
ಇದು, ಮಕ್ಕಳ ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳಗಲು ಕಾರಣ ವಾಯಿತು. ಅರಿವಿನ ಅರಮನೆ ಗ್ರಂಥಾ ಲಯಗಳನ್ನು ಹೊಂದಿದ 9 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಕಣ್ಣೂರು, ಮಂಗಲ, ಲೊಕ್ಕನಹಳ್ಳಿ, ಹನೂರು, ಮಣಗಳ್ಳಿ, ಬಂಡಳ್ಳಿ, ಬಸಪ್ಪನದೊಡ್ಡಿ, ರಾಮಾಪುರ, ಕೆಂಪ ಯ್ಯನಹಟ್ಟಿ ಶಾಲೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭಾ ಪ್ರದರ್ಶನ ಅಭಿವ್ಯಕ್ತಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು.
 
ಮನಸೂರೆಗೊಂಡ ಜ್ಞಾನಭಂಡಾರ ವೃಕ್ಷ: ಬಣ್ಣದ ಚಿತ್ತಾರದಿಂದ ಎಲೆಗಳನ್ನು ತಯಾರಿಸಿ ವಿದ್ಯಾರ್ಥಿಗಳೇ ನಿರ್ಮಿಸಿದ್ದ ಜ್ಞಾನ ಭಂಡಾರ ವೃಕ್ಷ ಶಿಕ್ಷಕರು ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರ ವಾಯಿತು.
 
ವೃಕ್ಷದಲ್ಲಿ ಅಳವಡಿಸಿದ್ದ ಕನ್ನಡ ವರ್ಣಮಾಲೆ ಅಕ್ಷರಗಳು, ಸ್ವರಗಳು, ವ್ಯಂಜನಗಳು, ಹೃಸ್ವಸ್ವರ, ಧೀರ್ಘಸ್ವರ ಮುಂತಾದವುಗಳನ್ನು ಜ್ಞಾನ ಭಂಡಾರ ವೃಕ್ಷದಲ್ಲಿ ಏರಿಕೆ ಕ್ರಮದಲ್ಲಿ ಓದುವುದ ರಿಂದ ಧೀರ್ಘಕಾಲ ನೆನೆಪಿನಲ್ಲಿ ಉಳಿ ಯಲು ಸಾಧ್ಯ ಎಂದು ವಿವರಿಸುತ್ತಿದ್ದ  ವಿದ್ಯಾರ್ಥಿ ಸಹನ ಅವರ ವಿವರಣೆ ತೀರ್ಪುಗಾರರ ಪ್ರಶಂಶೆಗೆ ಪಾತ್ರವಾಯಿತು.
 
ವಿವಿಧ ವಿಭಾಗದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಸುವುದು, ಸ್ಥಳದಲ್ಲೇ ಸಂಶೋಧನಾ ಯೋಜನೆಗಳು ಮಕ್ಕಳಲ್ಲಿ ಕ್ರಿಯಾಶೀಲ ಮತ್ತು ಸೃಜನಾತ್ಮಕತೆಯನ್ನು ಬಿಂಬಿಸಿತು. ಪ್ರಕೃತಿ  ಮತ್ತು ದೇವರನ್ನು ಕುರಿತ ಸ್ವರಚಿತ ಕವನಗಳು, ಪುಸ್ತಕ ವಿಮರ್ಶೆ, ಸಾಧಕರ ಪರಿಚಯ ಮತ್ತು ಸ್ವಚ್ಛ ಭಾರತ್‌ಗೆ ಸಂಬಂಧಿಸಿ ಚಾರ್ಟ್‌ ಗಳನ್ನು ಪ್ರದರ್ಶಿಸಲಾಯಿತು.
 
ಮಕ್ಕಳು ಗೋಡೆಯಲ್ಲಿ ಆಲೋ ಚನೆಗೆ ತಕ್ಕಂತೆ ಪರಿಸರದ ಮ್ಯುರಲ್ ಚಿತ್ರ ಬಿಡಿಸುವ ಮೂಲಕ ಸ್ಪರ್ಧೆಯಲ್ಲಿ ಸಂತಸ ದಿಂದ ಪಾಲ್ಗೊಂಡು ತಮ್ಮ ಕಲಾತ್ಮಕತೆ ಮೆರೆದರು. 
 
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವು ಕಲಿಕೆಯ ಅವಧಿಯಲ್ಲಿ ಅಧ್ಯಯನ ಶೀಲ ಗುಣ ಬೆಳೆಸಿಕೊಳ್ಳುವ ಜತೆಗೆ ಕೌಶಲ ಬೆಳೆಸಿ ಕೊಳ್ಳುವ ಅವಶ್ಯ ವಿದೆ. ಮಕ್ಕಳಲ್ಲಿ ವಿಜ್ಞಾನ ಮತ್ತು ಚಿತ್ರ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಪ್ರತಿ ವರ್ಷ ಇಂಥ ಕಾರ್ಯಕ್ರಮ ನಡೆಸ ಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ವಾಸುಕಿ ಸುಬ್ಬರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.