ADVERTISEMENT

‘ಶೋಷಿತ ವರ್ಗದ ಸಂಘಟನೆ ಮುಖ್ಯ’

ಬಿಎಸ್‌‍ಪಿ ಮಹಿಳಾ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 6:11 IST
Last Updated 18 ಏಪ್ರಿಲ್ 2018, 6:11 IST

ಯಳಂದೂರು: ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ , ನನ್ನ ಕುಟುಂಬದ ಹಿತಾಸಕ್ತಿಗೆ ರಾಜಕಾರಣ ಮಾಡುತ್ತಿಲ್ಲ. ಎಲ್ಲಾ ಶೋಷಿತ ವರ್ಗ ಮತ್ತು ಬಡವರನ್ನು ಸಂಘಟಿಸಿ ರಾಜಕೀಯಕ್ಕೆ ಶಕ್ತಿ ತುಂಬಲು ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ಎಂದು ಬಿಎಸ್‌ಪಿ ಅಭ್ಯರ್ಥಿ ಎನ್. ಮಹೇಶ್ ಹೇಳಿದರು.

ಅವರು ಪಟ್ಟಣದ ಬಳೇಪೇಟೆಯ ಶ್ರೀರಾಮಮಂದಿರದಲ್ಲಿ ಸೋಮವಾರ ನಡೆದ ಬಹುಜನ ಸಮಾಜ ಪಕ್ಷದ ಮಹಿಳಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

2004ರಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದಾಗ 19,500 ಮತಗಳಿಂದ ನಾಲ್ಕನೇ ಸ್ಥಾನ, 2008ರ ಚುನಾವಣೆಯಲ್ಲಿ 25,500 ಮತ ಪಡೆದು ಮೂರನೇ ಸ್ಥಾನ ಹಾಗೂ 2013ರ ಚುನಾವಣೆಯಲ್ಲಿ 37,500 ಮತ ಪಡೆದು ಎರಡನೇ ಸ್ಥಾನಕ್ಕೆ ಬರಲು ನೀವು ಕಾರಣ ಎಂದು ಸ್ಮರಿಸಿಕೊಂಡರು.

ADVERTISEMENT

ಈ ಬಾರಿ ನಿಮ್ಮ ಆಶೀರ್ವಾದದಿಂದ ಗೆದ್ದು ನಿಮ್ಮ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಭರವಸೆ ನೀಡಿದರು. ಲೇಖಕಿ ಅಮೃತಾ ಶೆಟ್ಟಿ ಅತ್ರಾಡಿ ಮಾತನಾಡಿದರು.

ತಾ.ಪಂ. ಸದಸ್ಯ ವೈ.ಕೆ. ಮೋಳೆ ನಾಗರಾಜು, ಧರಣಿ, ಸುಂದ್ರಮ್ಮ, ಅನ್ನಪೂರ್ಣ, ನಜ್ಮಾ, ಗೌರಮ್ಮ, ಮೆಹಬೂಬ್, ಭಾಗ್ಯ ಗಂಗಾಧರ್, ಸುಮಾ, ಮುಖಂಡರಾದ ಮಾದೇಶ್ ಉಪ್ಪಾರ್, ಮಾಂಬಳ್ಳಿ ರಾಮು, ಯರಿಯೂರು ಜಯಣ್ಣ, ಅಫ್ಸರ್ ಖಾನ್, ಆನಂದ್ ಉಪ್ಪಾರ್, ರಜನಿಕಾಂತ್, ಅಂಬಳೆ ಮಹಾದೇವ್, ಅಗರ ರಾಜು, ಶಂಕರನಾಗ್, ಕೇಶವಮೂರ್ತಿ, ರೇಚಣ್ಣ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.