ADVERTISEMENT

ಹುಂಡಿ: ₹ 8.83 ಲಕ್ಷ ನಗದು, 3.5 ಗ್ರಾಂ ಚಿನ್ನ ಸಂಗ್ರಹ

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:33 IST
Last Updated 27 ಮಾರ್ಚ್ 2015, 11:33 IST
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಮಧ್ಯರಂಗಾಥ ದೇವಾಲಯದಲ್ಲಿ ಗುರುವಾರ ಸಮೂಹ ದೇವಾಲಯಗಳ ಹುಂಡಿ ಹಣ ಎಣಿಕೆ ಮಾಡಲಾಯಿತು
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಮಧ್ಯರಂಗಾಥ ದೇವಾಲಯದಲ್ಲಿ ಗುರುವಾರ ಸಮೂಹ ದೇವಾಲಯಗಳ ಹುಂಡಿ ಹಣ ಎಣಿಕೆ ಮಾಡಲಾಯಿತು   

ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರ ಮಧ್ಯರಂಗನಾಥ ದೇವಾಲಯದಲ್ಲಿ ಗುರುವಾರ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿಗಳ ಹಣ ಎಣಿಕೆ ನಡೆುತು. ಹುಂಡಿಯಲ್ಲಿ 4 ತಿಂಗಳು 12 ದಿನಗಳ ಅವಧಿಯಲ್ಲಿ ₹ 8.83 ಲಕ್ಷ ನಗದು, 3.5 ಗ್ರಾಂ ಚಿನ್ನ ಹಾಗೂ 5 ಗ್ರಾಂ ಬೆಳ್ಳಿ ದೊರೆತಿದೆ.

ದೇವಾಲಯದ ಆವರಣದಲ್ಲಿ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನ ಮೀನಾಕ್ಷಿ ದೇವಾಲಯ, ರಂಗನಾಥಸ್ವಾಮಿ ದೇವಾಲಯಗಳ ಹುಂಡಿಗಳ ಎಣಿಕೆ ನಡೆಯಿತು. ಕಂದಾಯ ಇಲಾಖೆ, ಮುಜರಾಯಿ ಇಲಾಖೆ, ಬ್ಯಾಂಕ್ ಸಿಬ್ಬಂದಿಯಿಂದ ಹಾಗೂ ಪೊಲೀಸರು ಇದ್ದರು.

ತಹಶೀಲ್ದಾರ್ ಸಿ. ಮಹಾದೇವಯ್ಯ, ಪಾಳ್ಯ ಹೋಬಳಿ ಪ್ರಭಾರ ಉಪ ತಹಶೀಲ್ದಾರ್ ಪರಮೆಶ್, ಸಮೂಹ ದೇವಾಲಯಗಳ ಪ್ರಭಾರ ಕಾರ್ಯನಿರ್ವಹ ಣಾಧಿಕಾರಿ ಎನ್. ಸುರೇಶ್, ವೈಶ್ಯಾಬ್ಯಾಂಕಿನ ರಾಮು, ಆರ್.ಐ. ವೆಂಕಟರಮಣಸ್ವಾಮಿ, ರಾಮಚಂದ್ರ, ಪ್ರದೀಪ್, ಸುಂದ್ರೇಶ್, ಸತೀಶ್, ಜಯರಾಂ, ಉಪವಿಭಾಗಾಧಿಕಾರಿ ಕಚೇರಿ ಶಿವಮಲ್ಲಪ್ಪ ಹುಂಡಿ ಎಣಿಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.