ADVERTISEMENT

ಹೊಂಗಹಳ್ಳಿ; ಕೋಡಿಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 9:38 IST
Last Updated 11 ಏಪ್ರಿಲ್ 2017, 9:38 IST

ಗುಂಡ್ಲುಪೇಟೆ: ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ಕೋಡಿಬಸವೇಶ್ವರ ಸ್ವಾಮಿಯ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.ಜಾತ್ರೆ ನಿಮಿತ್ತ ಮನೆಗಳನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಹೊರವಲಯದ ಕೋಡಿಬಸವೇಶ್ವರ ದೇಗುಲ ಶುಚಿಗೊಳಿಸಿ, ಬಣ್ಣ ಬಳಿಸ ಲಾಗಿತ್ತು.

ಹೂವುಗಳಿಂದ ಅಲಂಕೃತ ರಥದಲ್ಲಿ ಉತ್ಸವಮೂರ್ತಿ ಇರಿಸಿ ಮಹಾ ಮಂಗಳಾರತಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ವಾದ್ಯಗೋಷ್ಠಿ, ನಂದಿಧ್ವಜ, ಕಂಸಾಳೆ, ಛತ್ರಿ, ಚಾಮರ, ವೀರಭದ್ರ ಕುಣಿತ ಇತರೆ ಕಲಾ ತಂಡಗಳೊಂದಿಗೆ ರಥವನ್ನು ಭಕ್ತರು ಮುಂದೆ ಎಳೆದು ಸಾಗಿದರು.

ಗ್ರಾಮದಿಂದ 2 ಕಿ.ಮೀ ದೂರದ ಕೋಡಿಬಸವೇಶ್ವರ ದೇವಾಲಯದ ವರೆಗೆ  ಭಕ್ತರು ದೊಡ್ಡಗಾತ್ರದ ಹಗ್ಗ ಕಟ್ಟಿ ರಥವನ್ನು ಎಳೆದರು.ಬೇಸಿಗೆ ಬಿಸಿ ಲೆಕ್ಕಿಸದೇ ಭಕ್ತರು ರಥ ಎಳೆದು ಭಕ್ತಿ ಮೆರೆದರು. ವಿವಿಧ ಗ್ರಾಮ ಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.