ADVERTISEMENT

ಅಂತರಾತ್ಮದ ಗುರುವನ್ನು ಕಂಡುಕೊಳ್ಳಿ

ಪತಂಜಲಿ ಯೋಗ ಸಮಿತಿಯಿಂದ ಗುರುಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 6:48 IST
Last Updated 10 ಜುಲೈ 2017, 6:48 IST

ಚಿಕ್ಕಬಳ್ಳಾಪುರ: ‘ನಿಮಗೆ ನೀವೇ ದಾರಿ ದೀಪಗಳಾಗಬೇಕು ಎಂದು ಹೇಳುವ ಮೂಲಕ ಗೌತಮ ಬುದ್ಧ ಪ್ರತಿಯೊಬ್ಬರೂ ತಮ್ಮ ಅಂತರಾಳದಲ್ಲಿರುವ ಗುರುವನ್ನು ಕಂಡುಕೊಳ್ಳುವ ಹಾದಿ ತೋರಿದರು. ಆ ದಿಸೆಯಲ್ಲಿ ನಾವೆಲ್ಲರೂ ಅಂತರಾತ್ಮದ ಗುರು ಕಂಡುಕೊಳ್ಳಲು ಪ್ರಯತ್ನಿಸಬೇಕು’ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಂಚನಬಲೆ ಗ್ರಾಮದ ಬಿ.ಜಿ.ಎಸ್.ವಿದ್ಯಾ ನಿಕೇತನ ಶಾಲೆಯಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿ ಯಿಂದ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮ ಹಾಗೂ ಯೋಗ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶವನ್ನು ರೋಗಮುಕ್ತಗೊಳಿಸುವ ಸಂಕಲ್ಪ ಹೊಂದಿರುವ ಬಾಬಾ ರಾಮ್‌ದೇವ್ ಅವರು ಪ್ರತಿ ಗ್ರಾಮದಲ್ಲಿ ಪ್ರತಿದಿನ ಯೋಗ ತರಗತಿಗಳು ನಡೆಯಬೇಕು ಎಂಬ ಆಶಯ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪತಂಜಲಿ ಯೋಗ ಸಮಿತಿಗಳು ಪ್ರತಿ ಗ್ರಾಮಗಳಲ್ಲಿ ಯೋಗ ತರಗತಿಗಳನ್ನು ಏರ್ಪಡಿಸುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಕಿಸಾನ್ ಪಂಚಾಯಿತ್ ಅಧ್ಯಕ್ಷ ಕೆ.ಎನ್.ಗೋಪಾಲಾಚಾರ್ ಮಾತನಾಡಿ, ‘ಕಳೆದ 20 ದಿನಗಳಿಂದ ಮಂಚನಬಲೆ ಮತ್ತು ಸಬ್ಬೇನಹಳ್ಳಿ ಗ್ರಾಮಗಳಲ್ಲಿ  ಯೋಗ ಸಮಿತಿಯ ವತಿಯಿಂದ ಯೋಗ ತರಗತಿಗಳು ನಡೆಯುತ್ತಿವೆ.

ಈ ತರಗತಿಗಳು ನಿತ್ಯ ಮುಂದುವರಿಯಲಿವೆ. ಪ್ರತಿ ಗ್ರಾಮದಲ್ಲಿ ಯೋಗ ತರಗತಿಗಳು ನಿರಂತರವಾಗಿ ನಡೆಯುವಂತೆ  ಮಾಡುವ ಸಂಕಲ್ಪ ತಮ್ಮದಾಗಿದೆ. ಪ್ರತಿಯೊಬ್ಬ ಗ್ರಾಮಸ್ಥರೂ ಯೋಗ ಕಲಿಯುವ ಮೂಲಕ ರೋಗ ಮುಕ್ತ ಜೀವನ ನಡೆಸಬೇಕು’ ಎಂದರು.

ಸಾಮೂಹಿಕ ಯೋಗ, ಪ್ರಾಣಾ ಯಾಮ ಮತ್ತು ಭಜನೆ ಏರ್ಪಡಿಸ ಲಾಗಿತ್ತು. ಯೋಗ ಶಿಕ್ಷಕ ಲೋಕನಾಥ್ ಅವರನ್ನು ಸನ್ಮಾನಿಸಲಾಯಿತು.

ಯೋಗ ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ರಾಮಚಂದ್ರ,  ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಲೋಕನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಮೂರ್ತಿ, ಭಾರತ್‌ ಸ್ವಾಭಿಮಾನ್ ಸಂಘಟನೆ ಅಧ್ಯಕ್ಷ ರಾಮಚಂದ್ರರೆಡ್ಡಿ, ಯುವ ಭಾರತ್ ಸಂಘಟನೆ ಅಧ್ಯಕ್ಷ ಗೋವಿಂದ್, ಖಜಾಂಚಿ ಮಹೇಶ್, ಯೋಗ ಸಮಿತಿಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ  ಗೋವಿಂದಪ್ಪ, ಪದಾಧಿಕಾರಿಗಳಾದ ಕೆ.ಎಂ.ಮುನಿಕೃಷ್ಣಪ್ಪ, ಮಂಚನಬಲೆ ಮುರಳಿ, ರಮೇಶ್, ರವಿ, ದೈಹಿಕ ಶಿಕ್ಷಕ ಚೆನ್ನಕೃಷ್ಣಪ್ಪ, ಸಬ್ಬೇನಹಳ್ಳಿ ತನುಭಾರದ್ವಾಜ್, ಹರ್ಷ, ಶಶಿಕಲಾ, ಎಂಎಸ್.ನಾಗರತ್ನಮ್ಮ, ಹನುಮಂತಪ್ಪ, ಪಿ.ಎನ್.ನಾಗರಾಜ್, ಕೆ.ಎ.ಮಂಜುನಾಥ್, ಬಿ.ಮಂಜುನಾಥ್, ಶ್ರೀರಾಮ್, ಯೋಗ ಶಿಕ್ಷಕರಾದ ಬಿ.ಸಿ.ಮಂಜಳಾ ಗೋಪಾಲಾಚಾರ್, ಮಂಚನಬಲೆ ವೆಂಕಟರೆಡ್ಡಿ,  ರವೀಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.