ADVERTISEMENT

ಐದು ದಿನಗಳಲ್ಲಿ 62 ನಾಮಪತ್ರ ಸಲ್ಲಿಕೆ

ಚಿಕ್ಕಬಳ್ಳಾಪುರ: ಸೋಮವಾರ 25 ಮಂದಿ ಉಮೇದುವಾರಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 8:58 IST
Last Updated 24 ಏಪ್ರಿಲ್ 2018, 8:58 IST

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಸೋಮವಾರ ಐದು ಕ್ಷೇತ್ರಗಳ ಪೈಕಿ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈವರೆಗೆ ಒಟ್ಟು 62 ಜನರು ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದಂತಾಗಿದೆ.

ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್, ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರು ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು. ಜತೆಗೆ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷ (ಎಂಇಪಿ) ಅಭ್ಯರ್ಥಿ ನೂರ್ ತಬಸುಮ್, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಎನ್.ಸುಧಾಕರ್, ಎಚ್.ಎನ್.ಸುಧಾಕರ್, ಪಿ.ಸಿ.ಮುರಳಿಧರ್ ನಾಮಪತ್ರ ಸಲ್ಲಿಸಿದರು.

ಬಾಗೇಪಲ್ಲಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಆರ್.ಮನೋಹರ್, ಎಂಇಪಿ ಅಭ್ಯರ್ಥಿ ಬಿ.ಎ. ಬಾಬಾಜನ್, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಎನ್.ಸುಬ್ಬಾರೆಡ್ಡಿ, ಉತ್ತಮ್‌ ಕುಮಾರ್, ಸೋಮಶೇಖರ್, ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಕೆ.ರವಿ, ಮೀರ್ ಗುಲಾಮ್ ಆಸ್ಕರಿ, ಎನ್.ಹನುಮಂತಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಬಿ.ಎ.ದೇವಕಿ, ಸಮಾಜವಾದಿ ಪಕ್ಷದಿಂದ ಖಾದರ್ ಸುಭಾನ್‌ಖಾನ್‌ ನಾಮಪತ್ರ ಸಲ್ಲಿಸಿದರು.

ADVERTISEMENT

ಶಿಡ್ಲಘಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿ ಎಂ.ರಾಜಣ್ಣ, ಮೇಲೂರು ರವಿಕುಮಾರ್, ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ, ಅಂಬೇಡ್ಕರ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮೌಲಾಜಾನ್, ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಾಣಿ ಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಜೆ.ವಿ.ರಘುನಾಥರೆಡ್ಡಿ, ಆರ್.ಸುಧಾಕರ್, ಎಂ.ಕೃಷ್ಣಾರೆಡ್ಡಿ, ಅಂಬೇಡ್ಕರ್ ಸಮಾಜವಾದಿ ಪಕ್ಷದಿಂದ ಜಮಿರ್ ಪಾಷ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.