ADVERTISEMENT

ಗುರುತಿನ ಚೀಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 5:46 IST
Last Updated 14 ಮೇ 2017, 5:46 IST

ಮುಳಬಾಗಿಲು: ‘ಅಂಗವಿಕಲರನ್ನು ಯಾರೂ ಕೀಳು ಭಾವನೆಯಿಂದ ಕಾಣಬಾರದು’ ಎಂದು ವೈದ್ಯ ಶಂಕರ್ ಮನವಿ ಮಾಡಿದರು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಕಲ ಚೇತನ ಹಾಗೂ ನಾಗರಿಕರ ಸಬಲೀಕರಣ ಇಲಾಖೆ, ವಿಕಲ ಚೇತನರ ಸಹಾಯವಾಣಿ ಹಾಗೂ ಮಹಾನ್ ಪೋಷಣಾ ಎಜುಕೇಷನಲ್ ಸಂಸ್ಥೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಉಚಿತ ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

‘ಸಂಸ್ಥೆ ವತಿಯಿಂದ ಪ್ರತಿ ತಿಂಗಳ ಎರಡನೇ ಮಂಗಳವಾರ ನಡೆಯುವ ಅಂಗವಿಕಲರಿಗೆ ಗುರುತಿನ ಚೀಟಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ’ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ್ ತಿಳಿಸಿದರು.

ಸಂಸ್ಥೆಯ ಅಧಿಕಾರಿ ವಿ.ಎಸ್. ಶ್ರೀನಿವಾಸ್, ವಿವಿಧೋದ್ದೇಶ ಪುನರ್ ನಿರ್ಮಾಣ  ಕಾರ್ಯದರ್ಶಿ ಬಾಬು, ವಿಕಲಚೇತನ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಆವಣಿ ಸತೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್.ನಾಗೇಶ್, ಶ್ರಿನಾಥ್, ಗ್ರಾಮಾಂತರ ವಿವಿಧೋದ್ದೇಶ ಪುನರ್ ನಿರ್ಮಾಣ ಸದಸ್ಯರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.