ADVERTISEMENT

ಗೌರಿಬಿದನೂರು ಅಭಿವೃದ್ಧಿಗೆ ಸೂಕ್ತ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2012, 9:05 IST
Last Updated 28 ಸೆಪ್ಟೆಂಬರ್ 2012, 9:05 IST

ಗೌರಿಬಿದನೂರು: ಪಟ್ಟಣದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 5 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಿದ್ದು, ಅದರ ಸದ್ಬಳಕೆಗೆ ಸೂಕ್ತ ರೀತಿಯ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.

ಪಟ್ಟಣದ ಮುನೇಶ್ವರ ಬಡಾವಣೆಯ ಪ್ರತಾಪ್ ಲೇಔಟ್‌ನಲ್ಲಿ ಬುಧವಾರ ಲಯನ್ಸ್ ಸಂಸ್ಥೆಯ ಕಣ್ಣಿನ ಆಸ್ಪತ್ರೆ ಭವನಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. `ಬಿಡುಗಡೆಯಾಗುವ ಅನುದಾನದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದ ರಸ್ತೆಗಳಿಗೆ ಡಾಂಬರೀಕರಣ, ಚರಂಡಿ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು~ ಎಂದರು.

ಇದೇ ವೇಳೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಇಸ್ತೂರಿ ಸತೀಶ್‌ಕುಮಾರ್ ಮಾತನಾಡಿ, `ಆಸ್ಪತ್ರೆಯ ಭವನಕ್ಕೆ 35 ಲಕ್ಷ ವೆಚ್ಚವಾಗಲಿದ್ದು, ಈಗಾಗಲೇ ಶಾಸಕರ ನಿಧಿಯಿಂದ 5 ಲಕ್ಷ ರೂಪಾಯಿ ಮತ್ತು ಸಂಸದರ ನಿಧಿಯಿಂದ 5 ಲಕ್ಷ ರೂಪಾಯಿ ಮಂಜೂರಾಗಿದೆ~ ಎಂದು ಹೇಳಿದರು.

ಲಯನ್ಸ್ ಸಂಸ್ಥೆಯ ಆರ್.ಕುಮಾರ್, ಪುರಸಭೆ ಉಪಾಧ್ಯಕ್ಷ ವಿ.ರಮೇಶ್, ಸದಸ್ಯರಾದ ಹಜಿರಾತರನೂಮ್, ಕಾಂತರಾಜ್, ಬಿ.ಎನ್.ರಾಮಯ್ಯ, ಪುರಸಭೆ ಮುಖ್ಯಾಧಿಕಾರಿ ಖಜಾಮೋಹನುದ್ದೀನ್, ಅಶ್ವತ್ಥರೆಡ್ಡಿ, ಗೋವಿಂದರಾಜು, ಕೆ,ರಾಮಾಂಜನೇಯಲು, ಡಾ.ರಾಜು ಮತ್ತಿತರರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.