ADVERTISEMENT

ಬಿಜೆಪಿ ಸಾಮಾನ್ಯ ಜನರ ಪಕ್ಷ

ವಿಸ್ತಾರಕ್ ಕಾರ್ಯಕ್ರಮದಲ್ಲಿ ಮುರಳೀಧರ ರಾವ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 9:42 IST
Last Updated 11 ಜುಲೈ 2017, 9:42 IST

ಶಿಡ್ಲಘಟ್ಟ: ‘ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿ, ಪ್ರಧಾನಿಯಾಗಲು  ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಮುರಳೀಧರ ರಾವ್ ತಿಳಿಸಿದರು.

ಬಿಜೆಪಿಯ ವಿಸ್ತಾರಕ್ ಕಾರ್ಯಕ್ರಮ ದಡಿ ತಾಲ್ಲೂಕಿನ ಗಂಜಿಗುಂಟೆಯಲ್ಲಿ ಭಾನುವಾರ ನಡೆದ ಮನೆ ಮನೆಗೂ ಭೇಟಿ ಹಾಗೂ  ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಆಡಳಿತವನ್ನು ದೇಶಕ್ಕೆ ನೀಡುತ್ತಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟ, ಸ್ಟೀಲ್ ಬ್ರಿಡ್ಜ್ ಸೇರಿದಂತೆ ಹಲವು ಯೋಜನೆಗಳಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸಿದೆ’ ಎಂದು ದೂರಿದರು.

ADVERTISEMENT

‘ಕೇಂದ್ರ ಬಿಜೆಪಿ ಸರ್ಕಾರದ ಜನಪರ ಆಡಳಿತವನ ಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ಅದಕ್ಕಾಗಿಯೆ ದೇಶಾದಾದ್ಯಂತ ವಿಸ್ತಾ ರಕ್ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. 15 ದಿನಗಳ ಈ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು ತಮ್ಮ  ಕ್ಷೇತ್ರ ದಲ್ಲಿ ಬೀಡು ಬಿಟ್ಟು ಕೇಂದ್ರದ ಯೋಜನೆ ಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸ ಬೇಕು’ ಎಂದು ಸಲಹೆ ನೀಡಿದರು.

‘ಪಕ್ಷ ಸಂಘಟಿಸಿ ಮುಂದಿನ ಚುನಾವ ಣೆಗಳಲ್ಲಿ  ಜಯಗಳಿಸುವಂತೆ ಮಾಡು ವುದೇ ನಮ್ಮ ಉದ್ದೇಶ’ ಎಂದರು.

ಇದಕ್ಕೂ ಮೊದಲು ಸ್ಥಳೀಯ ಮುಖಂಡರೊಂದಿಗೆ ಗಂಜಿಗುಂಟೆಯ ಹಲವು ಮನೆ ಮನೆಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಸಾಧನೆ ತಿಳಿಸುವ ಕರ ಪತ್ರ ಹಂಚಿದರು. 
ವಿಸ್ತಾರಕ್ ಯೋಜನೆ ಉಸ್ತುವಾರಿ ಮಧುಶ್ರೀ, ಮುಖಂಡರಾದ ಜ್ಯೋತಿ ರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯ ದರ್ಶಿಗಳಾದ ಕಂಬದಹಳ್ಳಿ ಸುರೇಂದ್ರ ಗೌಡ, ಶ್ರೀರಾಮರೆಡ್ಡಿ, ಡಿ.ಆರ್.ಶಿವ ಕುಮಾರ್‌ಗೌಡ,  ಶ್ರೀಧರ್, ಕೆಂಪರೆಡ್ಡಿ, ದಾಮೋದರ್, ಭಾಸ್ಕರ್ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.