ADVERTISEMENT

ರಸ್ತೆ ಅಭಿವೃದ್ಧಿಪಡಿಸಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:31 IST
Last Updated 5 ಸೆಪ್ಟೆಂಬರ್ 2017, 8:31 IST

ಚಿಕ್ಕಬಳ್ಳಾಪುರದ: ಸಂತೆ ಮೈದಾನದ ಬಳಿ ಇರುವ ಆಕಾಶ್‌ ಪದವಿ ಪೂರ್ವ ಕಾಲೇಜಿನ ಮುಂಭಾ ಗದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಹಲವು ವರ್ಷಗಳಿಂದ ಈ ರಸ್ತೆಗೆ ಡಾಂಬರೀಕರಣ ಮಾಡದೆ ಹಾಗೇ ಬಿಡಲಾಗಿದೆ. ಮಳೆ ಬಂದಾಗ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಸವಾರರ ಸ್ಥಿತಿ ಅಯೋಮಯವಾಗುತ್ತದೆ.

ಸ್ಥಳೀಯರು ಈ ರಸ್ತೆಯ ಕಿರಿಕಿರಿ ತಪ್ಪಿಸುವುದಕ್ಕಾಗಿ ಪರ್ಯಾಯವಾಗಿ ಪಕ್ಕದ ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಯವರು, ಜನ ಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಗೆ ಡಾಂಬರೀಕರಣ ಮಾಡಿಸಿದೆ ನಾಗರಿಕರಿಗೆ ಅನುಕೂಲವಾಗುತ್ತದೆ.
ಅನಿಲ್ ಸ್ಥಳೀಯ ನಿವಾಸಿ

ತ್ಯಾಜ್ಯ ತೆರವುಗೊಳಿಸಿ
ಚಿಕ್ಕಬಳ್ಳಾಪುರದ 23 ನೇ ವಾರ್ಡ್‌ನ ಚಾಮರಾಜಪೇಟೆಯ 2ನೇ ಅಡ್ಡ ರಸ್ತೆಯಲ್ಲಿ ಮನೆ ಕೆಡವಿದ ಹಳೆಯ ಅವಶೇಷಗಳು, ಕಲ್ಲು, ಮಣ್ಣನ್ನು ರಸ್ತೆಯ ಬದಿಯಲ್ಲಿಯೇ ರಾಶಿ ಹಾಕಿರುವುದರಿಂದ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆ ಸುರಿದಾಗಲೆಲ್ಲ ಇಲ್ಲಿನ ತ್ಯಾಜ್ಯ ಚರಂಡಿ ಸೇರುತ್ತಿದೆ. ನಗರಸಭೆ ಅಧಿಕಾರಿಗಳು ಸ್ವಲ್ಪ ಇತ್ತ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕು.
ಮಂಜುನಾಥ್, ಚಾಮರಾಜಪೇಟೆ ನಿವಾಸಿ

ADVERTISEMENT

ರಸ್ತೆ ದುರಸ್ತಿ ಮಾಡಿ
ಬಿಳ್ಳೂರಿನಿಂದ ಬಾಗೇಪಲ್ಲಿ ಪಟ್ಟಣಕ್ಕೆ ಹಾದುಹೋಗುವ ರಸ್ತೆಯು ಮಳೆ ಬಂದಾಗ ಕೆಸರು ಗದ್ದೆಯಾಗಿ ವಾಹನ ಸವಾರರು ತೀವ್ರ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬಿಳ್ಳೂರು ಗ್ರಾಮದ ಬಹುತೇಕ ರಸ್ತೆಗಳು ಎಲ್ಲಿ ನೋಡಿದರು ತಗ್ಗು ಪ್ರದೇಶಗಳು, ಆಳವಾದ ಗುಣಿಗಳು, ಮಣ್ಣಿನ ರಾಶಿ, ಜಲ್ಲಿ ಕಲ್ಲು, ವಿಲೇವಾರಿ ಆಗದ ತ್ಯಾಜ್ಯವಸ್ತುಗಳು, ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಇದರಿಂದ ವಾಹನ ಸವಾರರು ಮತ್ತು ನಾಗರಿಕರು ಓಡಾಡಲು ಸಾಹಸ ಪಡಬೇಕಾಗಿದೆ. ಜನರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ರಸ್ತೆ ದುರಸ್ತಿಗಾಗಿ ಹಲವು ಭಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗುತ್ತಿಲ್ಲ, ಮಳೆಗಾಲದಲ್ಲಿ ರಸ್ತೆಗಳು ಕೆಸರಿನ ಗದ್ದೆಗಳಾಗಿ ಮಾರ್ಪಡುತ್ತವೆ. ಬೇಸಿಗೆಯಲ್ಲಿ ದೂಳಿನಿಂದ ಆವೃತವಾಗುತ್ತವೆ. ಅಧಿಕಾರಿಗಳು ಇತ್ತ ಗಮನಹರಿಸಿ ಬಿಳ್ಳೂರಿನಿಂದ ಪಾತಪಾಳ್ಯ ಮಾರ್ಗದ ರಸ್ತೆ ದುರಸ್ತಿ ಮಾಡಬೇಕು.
ಬಿಳ್ಳೂರು ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.