ADVERTISEMENT

ಅಪರಾಧಗಳ ಸ್ವರೂಪ ಬದಲಾವಣೆ

ಕಡೂರಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:57 IST
Last Updated 12 ಜನವರಿ 2017, 9:57 IST
ಕಡೂರು: ತಂತ್ರಜ್ಞಾನಕ್ಕೆ ಪೂರಕ ವಾಗಿ ಅಪರಾಧಗಳ ಸ್ವರೂಪವೂ ಬದಲಾ ಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ  ಓಂಪ್ರಕಾಶ್ ಅಭಿಪ್ರಾಯಪಟ್ಟರು.
 
 ತಾಲ್ಲೂಕಿನ ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಶಾಲೆಯಲ್ಲಿ ಮೊದಲನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಮತ್ತು ಪಥಸಂಚಲನ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಅಪರಾಧಗಳು ವಿಭಿನ್ನ ರೀತಿಯಲ್ಲಿದ್ದು, ಇವುಗಳನ್ನು ಇಲಾಖೆ ಸಮರ್ಥವಾಗಿಯೇ ತನಿಖೆ ಮಾಡುತ್ತಿದೆಯಾದರೂ ಮನು ಷ್ಯನ ಸ್ವಭಾವ ಮಾತ್ರ ಬದಲಾಗುವುದಿಲ್ಲ ಎಂದು ಹೇಳಿದರು.
 
ಜನಸಂಖ್ಯೆ ಹೆಚ್ಚಿದಂತೆ ಅಪರಾಧ ಗಳ ಸಂಖ್ಯೆಯು ಹೆಚ್ಚುತಲಿದ್ದು, ಅದೇ ರೀತಿ ಪೊಲೀಸ್ ಸಿಬ್ಬಂದಿ ಸಂಖ್ಯೆಯು ಹೆಚ್ಚಬೇಕು. ಅದಕ್ಕಾಗಿ ಸುಮಾರು 800 ಹೊಸ ಪಿಎಸ್‌ಐಗಳನ್ನು ಭರ್ತಿ ಮಾಡಿ ಕೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾಪನೆ ನೀಡಿದ್ದೇನೆ, ರಾಜ್ಯದಲ್ಲಿ ಸುಮಾರು 1 ಸಾವಿರ ಠಾಣೆಗಳಿದ್ದು. ಇದರಲ್ಲಿ 35 ಮಹಿಳಾ ಠಾಣೆಗಳಿವೆ. 70 ಸಾವಿರ ಸಿಬ್ಬಂದಿಗಳಿದ್ದ ಇಲಾಖೆಯಲ್ಲಿ 1 ಲಕ್ಷ ಸಿಬ್ಬಂದಿಗಳಿದ್ದಾರೆ ಎಂದರು.
 
ಬೆಂಗಳೂರಿನಲ್ಲಿ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವೊಮ್ಮೆ ಸುಳ್ಳು ಘಟನೆಗಳು ಹೆಚ್ಚು ಪ್ರಚಾರ ಪಡೆಯುತ್ತವೆ. ದೃಶ್ಯ ಮಾಧ್ಯಮಗಳು ಇಂತಹ ಘಟನೆಯ ಬಗ್ಗೆ ಹೆಚ್ಚು ಪ್ರಚಾರ ನೀಡುತ್ತವೆ. ಆದರೆ ಅದು ಸುಳ್ಳು ಎಂದು ಅರಿವಾಗುವಷ್ಟರಲ್ಲಿ ಆಗಬೇಕಾದ ಪ್ರಮಾದ ಆಗಿ ಹೋಗಿ ರುತ್ತದೆ. ದೃಶ್ಯ ಮಾಧ್ಯಮಗಳ ನಿಯಂ ತ್ರಣಕ್ಕೆ ಹೊಸ ಕಾನೂನು ಅವಶ್ಯಕತೆ ಯಿದೆ. ಕಾನೂನು ಸುವ್ಯವಸ್ಥೆ ಪಾಲನೆ ಯಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕಿದೆ ಎಂದರು.
 
ನಕ್ಸಲರ ಬಗ್ಗೆ ಇಲಾಖೆ ಋಣಾತ್ಮಕ ವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಪರಾಧ ಹಾಗೂ ಅಪರಾ ಧಿಯ ಬಗ್ಗೆ ಇಲಾಖೆ ಋಣಾತ್ಮಕ ವಾಗಿಯೇ ನೋಡ ಬೇಕಾಗುತ್ತದೆ. ಏಕೆಂದರೆ ಬಿಡುಗಡೆಗೊಂಡಿರುವ ಕೆಲವು ನಕ್ಸಲರು ಮತ್ತೆ ತಮ್ಮ ಚಟುವಟಿಕೆಯನ್ನು ಪ್ರಾರಂಭಿ ಸಿರುವುದು ಇದಕ್ಕೆ ಕಾರಣವಾಗಿದೆ ಎಂದರು.
 
31ರಂದು ನಿವೃತ್ತಿ: ‘ ನಾನು ಇದೇ 31 ರಂದು ನಿವೃತ್ತಿಯಾಗಲಿದ್ದು. 35 ವರ್ಷ ಇಲಾಖೆಯ ವಿವಿಧ ಹುದ್ದೆಗಳಲ್ಲಿ ರಾಜ್ಯದ ಬೇರೆ-ಬೇರೆ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಉತ್ತಮ ಸೇವೆ ಸಲ್ಲಿಸಿದ ತೃಪ್ತಿಯಿದೆ. ಕಡೂರಿನಲ್ಲಿ ಗ್ರಾಮಾಂತರ ಠಾಣೆ ಅಥವಾ ಟ್ರಾಫಿಕ್ ಸ್ಟೇಷನ್ ಬಗ್ಗೆ ಬೇಡಿಕೆಯಿದೆ. ಅದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.  
 
ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಪ್ರೇಮ್ ಶಂಕರ್ ಮೀನಾ, ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಬಿಜಯ್‌ಕುಮಾರ್ ಸಿಂಗ್, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಹರಿಶೇಖರ್, ಕಡೂರು ತರಬೇತಿ ಕೇಂದ್ರ ಅಧೀಕ್ಷಕ ಮತ್ತು ಪ್ರಾಂಶುಪಾಲ ಚನ್ನಯ್ಯ ಇದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.