ADVERTISEMENT

ಅಭಿವೃದ್ಧಿಗೆ ಸಾಂಖ್ಯಿಕ ಇಲಾಖೆ ಅಗತ್ಯ

ನೂತನ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಉದ್ಘಾಟಿಸಿ ಸೀತಾರಾಂ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:54 IST
Last Updated 25 ಅಕ್ಟೋಬರ್ 2016, 9:54 IST
ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಜಿಲ್ಲಾಡಳಿತ ಮತ್ತು ಯೋಜನೆ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎಂ.ಆರ್.ಸೀತಾರಾಂ ಸೋಮವಾರ ಉದ್ಘಾಟಿಸಿದರು.
ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಜಿಲ್ಲಾಡಳಿತ ಮತ್ತು ಯೋಜನೆ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎಂ.ಆರ್.ಸೀತಾರಾಂ ಸೋಮವಾರ ಉದ್ಘಾಟಿಸಿದರು.   

ಚಿಕ್ಕಮಗಳೂರು: ಸಂಖ್ಯಾ ಸಂಗ್ರಹಣಾ ಇಲಾಖೆಗಳು ಸರ್ಕಾರದ ಬಜೆಟ್‌್ ಪೂರ್ವ ಸಿದ್ಧತೆ ಹಾಗೂ ವಿವಿಧ ಇಲಾಖೆ ಗಳ ವಾರ್ಷಿಕ ಮಾಹಿತಿ ಸಂಗ್ರಹಣೆ, ಸಂಸ್ಕರಣೆ ಮೂಲಕ ರಾಜ್ಯದ ಪ್ರಗತಿಗೆ ಶ್ರಮಿಸುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಖಾತೆ ಸಚಿವ ಎಂ.ಆರ್‌.ಸೀತಾರಾಂ ತಿಳಿಸಿದರು.

ನಗರದ ಹೊರವಲಯದಲ್ಲಿ ಜಿಲ್ಲಾ ಡಳಿತ ಮತ್ತು ಯೋಜನೆ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲಾ ಇಲಾಖೆಗಳಿಗೆ ಸಂಖ್ಯಾ ಸಂಗ್ರಹಣಾ ಇಲಾಖೆ ಬೆನ್ನೆ ಲುಬು. ಸಂಖ್ಯಾ ಇಲಾಖೆ ಸರ್ಕಾರ ರೂಪಿ ಸುವ ಬಜೆಟ್‌, ವಿವಿಧ ಇಲಾಖೆಗಳ ಅಂಕಿ ಅಂಶಗಳ ಬಗ್ಗೆ ನೌಕರರಿಗೆ ಆಂತರಿಕ ಮಾಹಿತಿ ನೀಡುತ್ತಿದೆ. ಅಲ್ಲದೆ, ಕೃಷಿ ಇಲಾಖೆಯಲ್ಲಿ ರೈತರ ವಿಮೆ ಮತ್ತು  ಸರ್ಕಾರ ತೆಗೆದುಕೊಳ್ಳುವ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ದಾಖಲೆ ಒದಗಿ ಸುತ್ತಿದ್ದು, ರಾಜ್ಯದಾದ್ಯಂತ ಜಿಲ್ಲಾಡಳಿತಕ್ಕೆ ಪೂರಕ ಮಾಹಿತಿ ಒದಗಿಸಿ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಜಿಲ್ಲೆಯ ಸುಂದರ ಪರಿಸರದಲ್ಲಿ ₹1.72 ಕೋಟಿ ವೆಚ್ಚದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಕಟ್ಟಡ ತಲೆ ಎತ್ತಿ, ಸೇವೆಗೆ ಸಿದ್ಧವಾಗಿದೆ. ರಾಜ್ಯದಲ್ಲಿ ಹಾಸನ, ರಾಯಚೂರು ಸೇರಿದಂತೆ ಮೂರು ಕಡೆ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗಳು ಪ್ರಾರಂಭವಾಗಿವೆ. ಜನತೆಗೆ ಪೂರಕ ಮಾಹಿತಿ ನೀಡಲು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಸಂಖ್ಯಾ ಸಂಗ್ರಹಣಾ ಧಿಕಾರಿಗಳ ಕಚೇರಿ ಸ್ಥಾಪಿಸಬೇಕಿದೆ ಎಂದರು.

ಶಾಸಕ ಬಿ.ಬಿ.ನಿಂಗಯ್ಯ ಮಾತ ನಾಡಿ, ಮಳೆ ಅಭಾವದಿಂದ ಜಿಲ್ಲೆಯ ಎರಡು ತಾಲ್ಲೂಕುಗಳನ್ನು ಹೊರತು ಪಡಿಸಿ ಉಳಿದವನ್ನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಲಾಗಿದೆ. ಇದೆ ಪರಿಸ್ಥಿತಿ ಮುಂದುವರಿದರೆ ಇಡೀ ಜಿಲ್ಲೆ ಯನ್ನೆ ಬರಪೀಡಿತ ಪ್ರದೇಶವಾಗಿ ಘೋಷಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಸುಮಾರು15 ಲಕ್ಷ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ್ದ ಕಾಫಿ ತೋಟಗಳು ಮಳೆ ಅಭಾವದಿಂದ ಉದ್ಯೋಗ ಸೃಷ್ಟಿಸ ಲಾಗದೆ, ಒಣಗುತ್ತಿವೆ. ಕೆಲಸಕ್ಕಾಗಿ ಗುಳೆ ಹೋಗುವ ಸ್ಥಿತಿ ಬಂದಿದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿಲ್ಲದಂತಾಗಿದೆ. ಅದ ರಲ್ಲೂ ತಾಲ್ಲೂಕಿನ ಮೈಲಿಮನೆ ಗ್ರಾಮ ದಲ್ಲಿ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ ಬಂದಿದೆ ಎಂದರು.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಮಾತನಾಡಿ, ಪ್ರಾರಂಭದ ಮೊದಲು ಸರ್ಕಾರಿ ಕಟ್ಟಡಗಳು ಸುಸ್ತಿತಿ ಯಲ್ಲಿರುತ್ತವೆ. ನಂತರದಲ್ಲಿ  ಆಂತರಿಕ ಹಾಗೂ ಬಾಹ್ಯ ನಿರ್ವಹಣೆ ಸಮಸ್ಯೆ ಕಾಡುತ್ತದೆ. ಕ್ಷೇತ್ರದ ಜನತೆಗೆ ಉತ್ತರ ನೀಡಲು ಆಗುತ್ತಿಲ್ಲ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಮರ್ಪಕ ಕೆಲಸ ನಡೆಯುತ್ತಿಲ್ಲ.

ಚಿಕ್ಕ,ಪುಟ್ಟ ಕೆಲಸಕ್ಕೂ ಇಂದು, ನಾಳೆ ಬನ್ನಿ ಎಂದು ಸಾಗ ಹಾಕುತ್ತಿದ್ದಾರೆ. ಜಿಲ್ಲೆ ಹಾಗೂ ಮೂಡಿಗೆರೆ ಕಂದಾಯ ಇಲಾಖೆಗಳು ಕೊಳೆತು ನಾರುತ್ತಿವೆ. ಎಲ್ಲಾ ತಾಲ್ಲೂಕು ಕಚೇರಿ ಗಳನ್ನು ಶುದ್ಧಗೊಳಿಸಬೇಕಿದೆ ಎಂದರು.

ನಗರದ ಹೊರವಲಯದಲ್ಲಿ ಸರ್ಕಾರಿ ಇಲಾಖೆ ಸ್ಥಾಪನೆಗೆ ಸ್ಥಳ ಪರಿಶೀಲಿಸಿ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ ಉಂಟಾಗಿರುವ  ಬರಗಾಲ ಪರಿಸ್ಥಿತಿ ಎದುರಿಸಲು ಸರ್ಕಾರ ನೀಡು ತ್ತಿರುವ ಅನುದಾನ ಸಾಲುತ್ತಿಲ್ಲ. ಜಿಲ್ಲೆಯ ಜನತೆಗೆ ಮೂಲಸೌಲಭ್ಯ ಒದಗಿಸಲು ಸರ್ಕಾರಕ್ಕೆ ಒತ್ತಡ ತರಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಂಭವಿಸುವ ಹಾನಿಗೆ ಜಿಲ್ಲಾಡಳಿತ ತಾತ್ಕಾಲಿಕ ಪರಿಹಾರ ನೀಡ ಬಹುದೆ ಹೊರತು ಶಾಶ್ವತ ಪರಿಹಾರ ನೀಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿ ತಿಗಳಿಗೆ ಜನರೇಟರ್‌ ಅಗತ್ಯವಿದೆ. ಜಿಲ್ಲೆಯಲ್ಲಿ ಪ್ರಾರಂಭವಾಗಿ ರುವ ಸಂಖ್ಯಾ ಸಂಗ್ರಹಣಾ ಇಲಾಖೆ ಯನ್ನು ಜನಸ್ನೇಹಿ ಕೇಂದ್ರವಾಗಿ ರೂಪಿಸಬೇಕಿದೆ ಎಂದರು.

ಜಿಲ್ಲಾಧಿಕಾರಿ ಜಿ.ಸತ್ಯವತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್‌.ಮಹೇಶ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಸಹಾಯಕ ನಿರ್ದೇಶಕಿ ಶಶಿಕಲಾ, ನಗರೆಸಭೆ ಅಧ್ಯಕ್ಷೆ ಕವಿತಾಶೇಖರ್, ಸಾಂಖ್ಯಿಕ ಇಲಾಖೆಯ ನಿರ್ದೇಶಕ ಸುಬ್ರಹ್ಮಣ್ಯ, ಹೆಚ್ಚುವರಿ ನಿರ್ದೇಶಕಿ ವಸುಂಧರಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೆಂಕಟೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.