ADVERTISEMENT

‘ಅರಣ್ಯನಾಶದಿಂದ ಅಂತರ್ಜಲ ಕುಸಿತ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:38 IST
Last Updated 8 ಜುಲೈ 2017, 9:38 IST

ಶೆಟ್ಟಿಕೊಪ್ಪ(ಎನ್.ಆರ್.ಪುರ): ಪ್ರಸ್ತುತ ನದಿಮೂಲ, ಹಳ್ಳಕೊಳ್ಳಗಳಲ್ಲಿ ಅಂತ ರ್ಜಲ ಕುಸಿತಕ್ಕೆ ಅರಣ್ಯ ನಾಶವೇ ಮೂಲ ಕಾರಣವಾಗಿದೆ ಎಂದು ಎನ್.ಆರ್.ಪುರ ವೃತ್ತ ವಲಯ ಅರಣ್ಯಾಧಿಕಾರಿ ಸತೀಶ್‌ ಕುಮಾರ್ ಹೇಳಿದರು.

ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವನಮ ಹೋತ್ಸವ ಕಾರ್ಯಕ್ರಮದಲ್ಲಿ  ಮಾತನಾ ಡಿದರು. ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಧಾಕರ್‌ ಆಚಾರ್  ಮಾತನಾಡಿ, ತಾಲ್ಲೂಕು ವ್ಯಾಪ್ತಿಯಲ್ಲಿ ತುಂಗಾ, ಭದ್ರಾ ನದಿಗಳು ಹರಿಯುತ್ತಿವೆ.

ಆದರು ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲದೆ ಕೃಷಿಗೂ ನೀರು ಇಲ್ಲದ ಸ್ಥಿತಿ ಇದೆ. ಮೂರು ವರ್ಷಗಳಿಂದ ಮಳೆ ಕೊರತೆಯಿಂದಾಗಿ ನದಿ, ಹಳ್ಳ, ಕೊಳ್ಳಗಳಲ್ಲಿ ನೀರಿಲ್ಲದಂತಾಗಿ ಅಂತರ್ಜಲ ಬತ್ತಿ ಹೋಗಿರುವುದಕ್ಕೆ ಅರಣ್ಯ ನಾಶವೇ ಕಾರಣ. ಅರಣ್ಯ ಬೆಳೆಸುವ ಹಾಗೂ ರಕ್ಷಣೆ ಮಾಡುವ ಕಾರ್ಯ ಆಗಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಜಾಲಿಬಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು. ಮನೆಯ ಸುತ್ತ ಮುತ್ತವಿರುವ ಜಾಗದಲ್ಲೂ ಗಿಡವನ್ನು ಬೆಳೆಸಿ ಉತ್ತಮ ಪರಿಸರವನ್ನು ಕಾಪಾಡಿ ಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಲೇಮಾನ್,ಎ. ಎಲ್. ಮಹೇಶ್, ಮುಖ್ಯಶಿಕ್ಷಕಿ ಪುಟ್ಟಮ್ಮ, ಪತ್ರಕರ್ತ ಎಂ. ಮಹೇಶ್, ಉಪವಲಯ ಅರಣ್ಯಾಧಿಕಾರಿ ಮನೋಹರ ನಾಯ್ಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರುಣಾಕರಶೆಟ್ಟಿ, ಶಿಕ್ಷಕರಾದ ಮಂಜುಶ್ರೀ, ನಾಗೇಶ್‌ರಾವ್ ಪಾಲ್ಗೊಂಡಿದ್ದರು. ಸೋಷಿಯಲ್ ವೆಲ್ಫೇರ್ ಸೊಸೈಟಿಯಿಂದ ಉಚಿತವಾಗಿ ನೀಡಿದ ನೋಟ್‌ ಪುಸ್ತಕ ಮತ್ತು ಪರಿಕರ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.