ADVERTISEMENT

‘ಅಸಮಾನತೆ ನಿವಾರಣೆಗೆ ಮೀಸಲಾತಿ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 6:18 IST
Last Updated 15 ಏಪ್ರಿಲ್ 2017, 6:18 IST

ನರಸಿಂಹರಾಜಪುರ: ‘ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿ ಯನ್ನು ಜಾರಿಗೆ ತಂದರು’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾ ಪಕ ಡಾ.ಅಣ್ಣಪ್ಪ ಎನ್.ಮಳೀಮಠ್ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಶ್ರಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ರವರ 126ನೇ ಹಾಗೂ ಡಾ.ಬಾಬು ಜಗಜೀವನರಾಂ ರವರ 110ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

‘ಆರ್ಥಿಕವಾಗಿ ದುರ್ಬಲರಾದರೆ ಎಲ್ಲ ಸಮುದಾಯದವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಶಿಕ್ಷಣದಲ್ಲಿ ಮುಂದುವ ರೆದರೆ ಒಳ್ಳೆಯ ಅವಕಾಶಗಳು ಲಭಿಸುತ್ತವೆ ಎಂಬುದು ಇಬ್ಬರು ಮಹಾತ್ಮರ ಚಿಂತನೆಯಾಗಿತ್ತು. ಪ್ರತಿಭೆಯ ಜತೆಗೆ ಸ್ಪಷ್ಟ ಗ್ರಹಿಕೆ, ಒಳನೋಟ, ತತ್ವ ಬದ್ಧತೆ, ನಿಷ್ಠೆಗಳನ್ನು ಉಳ್ಳವರು, ತಾವು ಬಂದ ಸಮುದಾಯದ ನೋವು, ಅಸಮಾನತೆ, ವರ್ಣವ್ಯವಸ್ಥೆ ಸೃಷ್ಟಿಸಿದ ಕಠೋರ ಸನ್ನಿವೇಶ ಎಲ್ಲವನ್ನೂ ಅರಿವು ಪ್ರಬುದ್ಧ ಚಿಂತನೆ ಅವರಲ್ಲಿತ್ತು’ ಎಂದರು. 

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಶಾಸಕ ಡಿ.ಎನ್.ಜೀವರಾಜ್, ‘ಆರ್ಥಿಕವಾಗಿ, ಸಾಮಾಜಿಕವಾಗಿ ಯಾರು ಹಿಂದುಳಿದಿದ್ದರೂ ಅವರೇ ನಿಜ ವಾದ ದಲಿತರು. ಎಲ್ಲ ಸೌಲಭ್ಯವಿರುವ ಶ್ರೀಮಂತ ದಲಿತ ವರ್ಗದವರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು. ಆಗ ಮಾತ್ರ ಅಂಬೇಡ್ಕರ್ ಕನಸು ನನಸಾಗು ತ್ತದೆ ಎಂದರು.

ಶಿಕ್ಷಣ ಇಲಾಖೆಯ ಬಿಆರ್ ಸಿ ಕೆ.ಎಸ್.ರಾಜಕುಮಾರ್ ಉಪನ್ಯಾಸ ನೀಡಿದರು. ತಹಶೀಲ್ದಾರ್ ಟಿ.ಗೋಪಿ ನಾಥ್‌, ತಾಲ್ಲೂಕು ಪಂಚಾಯಿತಿ ಇಒ ಕೆ.ಹೊಂಗಯ್ಯ,ದಲಿತ ಮುಖಂಡರಾದ ಡಿ.ರಾಮು, ಎ.ಸಿ.ಶ್ರೀನಿ ವಾಸ್, ಬಗರ್ ಹುಕುಂ ಸಮಿತಿಯ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಇದ್ದರು.ಅಂತರಜಾತಿ ವಿವಾಹವಾದವರಿಗೆ ಸಹಾಯಧನ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.