ADVERTISEMENT

ಉಡೇವಾ: ಗ್ರಾಮಸ್ಥರಿಂದ ಬಹಿರಂಗ ಹರಾಜು

ಪಂಚಾಯಿತಿ ಅಧ್ಯಕ್ಷರು–ಸದಸ್ಯರು ಹೊರಗೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:36 IST
Last Updated 2 ಫೆಬ್ರುವರಿ 2017, 6:36 IST
ಉಡೇವಾ: ಗ್ರಾಮಸ್ಥರಿಂದ ಬಹಿರಂಗ ಹರಾಜು
ಉಡೇವಾ: ಗ್ರಾಮಸ್ಥರಿಂದ ಬಹಿರಂಗ ಹರಾಜು   

ತರೀಕೆರೆ: ತಾಲ್ಲೂಕಿನ ಸಮೀಪದ  ಉಡೇವಾ ಗ್ರಾಮ ಪಂಚಾಯಿತಿಯ 2016-17 ನೇ ಸಾಲಿನ ಅಮಾರಾಯಿ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾ ಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೊರಗಿಟ್ಟು ಗ್ರಾಮಸ್ಥರೇ ಪಿಡಿಓ ಸಮ್ಮುಖದಲ್ಲಿ ಬಹಿರಂಗ ಹರಾಜನ್ನು ಮಾಡಿದ ಘಟನೆ  ಬುಧವಾರ ನಡೆದಿದೆ.

ಈ ಹಿಂದೆ ಉಡೇವಾ ಗ್ರಾಮ ಪಂಚಾಯಿತಿಯಲ್ಲಿ ಕರೆಯಲಾಗಿದ್ದ ನಾಲ್ಕು ಸಾಮಾನ್ಯ ಸಭೆಗಳಿಗೆ ಸದಸ್ಯರು ಬಾರದೇ ಕೊರಂ ಕೊರತೆಯಿಂದಾಗಿ  ಸಭೆ ಮುಂದೂಡಲಾಗಿತ್ತು. ಅಲ್ಲದೇ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪ ಡಿಸಿ ಗ್ರಾಮದ ಅಭಿವೃದ್ಧಿಗೆ ಇದರಿಂದ ನಷ್ಟವಾಗುತ್ತಿದ್ದು, ಗ್ರಾಮ ಪಂಚಾಯಿ ತಿಯನ್ನು ಸೂಪರ್‌ಸೀಡ್‌ ಮಾಡಿ ಎಂದು ಒತ್ತಾಯಿಸಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.

ಉಡೇವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡೇವಾ, ಯರಂದಂಕಲು ಮತ್ತು ಮರಕಲ್ಲಳ್ಳಿ ಈ ಮೂರು ಗ್ರಾಮಗಳ ವ್ಯಾಪ್ತಿಯ 302 ಹುಣಸೆ ಮರಗಳ ಬಹಿರಂಗ ಹರಾಜು ಪ್ರಕ್ರಿಯೆ ಯನ್ನು ಬುಧವಾರ ನಡೆಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ  ಟಿ.ಆಂಡಿ ಆದೇಶದಂತೆ ಪಿ.ಡಿ.ಓ ಎನ್.ಎಸ್. ನಾಗರಾಜ್ ಅವರು ತಯಾರಿ ನಡೆಸಿ ಹರಾಜಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ಕೆಲವು ಸ್ಥಳೀ ಯರು, 5 ತಿಂಗಳಿಂದ ಸಭೆ ನಡೆದಿಲ್ಲ.  ಸಭೆಯಲ್ಲಿ ತೀರ್ಮಾನ ಮಾಡದೇ ನಿಮ್ಮಿ ಷ್ಟದಂತೆ ಬಹಿರಂಗ ಹರಾಜು ಹಾಕಲು ನಿಮಗೆ ಹೇಳಿದವರು ಯಾರು, ಯಾರ ಕೇಳಿ ಹರಾಜು ಪ್ರಕ್ರಿಯೆಗೆ ದಿನಾಂಕ  ಗೊತ್ತುಪಡಿಸಿದ್ದಿರಿ ಎಂದು ಅಧ್ಯಕ್ಷರು ಹಾಗೂ ಪಿ.ಡಿ.ಓ ಅವರನ್ನು ತರಾಟೆಗೆ ತೆಗೆದುಕೊಂಡರು. ಹೇಗೆ ಬಹಿರಂಗ ಹರಾಜು ನಡೆಸುತ್ತೀರಾ ನಾವು ನೋಡು ತ್ತೇವೆ ಎಂದು ಅವಾಜು ಹಾಕಿದಾಗ ಕೆಲ ಕಾಲ ಗದ್ದಲದ ವತಾವರಣ ನಿರ್ಮಾ ಣವಾಯಿತು.  ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಮಂಜಪ್ಪ ಅವರು ಗಲಾಟೆಯನ್ನು ಶಮನಗೊಳಿಸಿ ದರಲ್ಲದೇ  ಎರಡು ಕಡೆಯವರಿಗೂ ಸಮಾಧಾನ  ಹೇಳಿ  ಪಂಚಾಯಿತಿಗೆ ಬರ ಬೇಕಾಗಿರುವ ಆದಾಯವನ್ನು ತಪ್ಪಿಸು ವುದು ಸರಿಯಲ್ಲ ಎಂದು ಹರಾಜು ಪ್ರಕ್ರಿ ಯೆ ನಡೆಸಲು ಅನುವು ಮಾಡಿಕೊಟ್ಟರು.

ಹರಾಜು ಪ್ರಕ್ರಿಯೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಯಾರೂ ಇರಕೂ ಡದು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಕಾರಣ ಅವರು ಸಾರ್ವಜನಿಕರ ಜತೆ ಯಲ್ಲಿ ನಿಂತು ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಿದರು. ಪಿ.ಡಿ.ಓ ಹಾಗೂ ಕಚೇರಿ ಗುಮಾಸ್ತರಿಂದ ಬಹಿರಂಗ ಹರಾಜು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.