ADVERTISEMENT

ಎಸ್ಸೆಸ್ಸೆಲ್ಸಿ: ಬೀರೂರು ವಲಯ ಶೇ 75 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2017, 5:57 IST
Last Updated 14 ಮೇ 2017, 5:57 IST

ಬೀರೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ದಲ್ಲಿ ಬೀರೂರು ಶೈಕ್ಷಣಿಕ ವಲಯವು ಶೇ.75.16 ಫಲಿತಾಂಶ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌ ತಿಳಿಸಿದರು. 
ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ವಲಯದ ಎಲ್ಲ ಶಾಲೆಗಳ ಫಲಿತಾಂಶದ ವಿವರ ನೀಡಿ ಅವರು ಮಾತನಾಡಿದರು.

ಬೀರೂರು ಶೈಕ್ಷಣಿಕ ವಲಯದಲ್ಲಿ 16 ಸರ್ಕಾರಿ, 4 ವಸತಿ ಶಾಲೆಗಳು, 15 ಅನುದಾನಿತ ಶಾಲೆಗಳು ಮತ್ತು 3 ಅನುದಾನ ರಹಿತ ಶಾಲೆಗಳು ಇದ್ದು ಕೇವಲ 2 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. ಕಳೆದ ಬಾರಿ 17 ಶಾಲೆಗಳು ಶೇ 100 ಫಲಿತಾಂಶ ಪಡೆದಿ ದ್ದವು ಮತ್ತು ಶೇ 94 ಫಲಿತಾಂಶ ದೊಂದಿಗೆ ವಲಯವು ರಾಜ್ಯದಲ್ಲಿ ಐದನೇ ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ಶೇ.20ರಷ್ಟು ಫಲಿತಾಂಶ ಕುಸಿತ ಕಂಡಿದೆ.

ಸರ್ಕಾರಿ ಶಾಲೆಗಳಲ್ಲಿ ಬೀರೂರಿನ ಎಎಂಆರ್‌ ಬಾಲಿಕಾ ಪ್ರೌಢಶಾಲೆ ಶೇ. 70.79, ಮಾರ್ಗದ ಮಹದೇವಪ್ಪ ಪ್ರೌಢಶಾಲೆ ಶೇ 90.32, ಕೆಎಲ್‌ಕೆ ಪದವಿಪೂರ್ವ ಕಾಲೇಜು ಶೇ72.41, ಲಿಂಗದಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಶೇ 75.21, ಜೋಡಿ ಹೋಚಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇ ಜು ಶೇ 87.50, ಬಳ್ಳಿಗನೂರು ಸರ್ಕಾರಿ ಪ್ರೌಢಶಾಲೆ ಶೇ 80.95, ನಂದಿ ಬಟ್ಟಲು ಮೊರಾರ್ಜಿ ವಸತಿ ಶಾಲೆ ಶೇ 87.10, ಜೋಡಿತಿಮ್ಮಾಪುರ ಸರ್ಕಾರಿ ಪ್ರೌಢಶಾಲೆ ಶೇ 71.43, ಜೋಡಿಲಿಂಗದಹಳ್ಳಿ ಮೊರಾರ್ಜಿ ವಸತಿ ಶಾಲೆ ಶೇ 92.11, ಸಖರಾಯಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 86.67, ಗುಬ್ಬಿಹಳ್ಳಿ ಸರ್ಕಾರಿ ಪ್ರೌಢ ಶಾಲೆ ಶೇ 62.50, ಜಿಗಣೇಹಳ್ಳಿ ಸರ್ಕಾರಿ ಪ್ರೌಢಶಾಲೆ ಶೇ 85.19, ಸರ್ಕಾರಿ ಪ್ರೌಢಶಾಲೆ ಎಸ್‌. ಬಿದರೆ ಶೇ 81.82, ಆಲಘಟ್ಟ ಶೇ 62.07, ಎಮ್ಮೆದೊಡ್ಡಿ ಶೇ 83.33, ಬಳ್ಳಾವರ ಶೇ 68.18, ಸರ್ಕಾರಿ ಪ್ರೌಢಶಾಲೆ ಉಡೇವ ಶೇ 100, ಮಾಚಗೊಂಡ ನಹಳ್ಳಿ ಶೇ 60, ಜೋಡಿಹೋಚಿಹಳ್ಳಿ ಮೊರಾರ್ಜಿ ವಸತಿಶಾಲೆ ಶೇ  92.86 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಶೇ 97.78 ಫಲಿತಾಂಶ ಗಳಿಸಿವೆ.

ADVERTISEMENT

ಅನುದಾನಿತ ಶಾಲೆಗಳಲ್ಲಿ ಬೀರೂರಿನ ಎಸ್‌ಜೆಎಂ ಪ್ರೌಢಶಾಲೆ ಶೇ 52.46, ಸಂತವೇರಿ ಅಂಬೇಡ್ಕರ್‌ ಪ್ರೌಢಶಾಲೆ ಶೇ 37.50, ಸಿದ್ದರಾಮೇಶ್ವರ ಗ್ರಾಮಾಂತರ ಪ್ರೌಢಶಾಲೆ ಚಿಕ್ಕಂಗಳ ಶೇ 54.17, ಬೀರೂರು ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಶೇ 34.78, ನಿಡಘಟ್ಟದ ರೇವಣಸಿದ್ದೇಶ್ವರ ಪ್ರೌಢಶಾಲೆ ಶೇ 84.85, ಸಖರಾಯ ಪಟ್ಟಣ ಸೇವಾಲಾಲ್‌ ಪ್ರೌಢಶಾಲೆ ಶೇ 57.50, ದೇವನೂರು ಲಕ್ಷ್ಮೀಶ ಸಂಯುಕ್ತ ಪ್ರೌಢಶಾಲೆ ಶೇ 85.71, ಎಸ್‌.ಬಿದರೆ ವಿಶ್ವೇಶ್ವರಯ್ಯ ಪ್ರೌಢಶಾಲೆ ಶೇ51.85, ತಣಿಗೇಬೈಲು ಚೌಡೇಶ್ವರಿ ಪ್ರೌಢಶಾಲೆ ಶೇ 75, ಹುಲಿಕೆರೆ ಗ್ರಾಮಾಂತರ ಪ್ರೌಢಶಾಲೆ ಶೇ 66.67, ನಾಗೇನಹಳ್ಳಿ ಆಂಜನೇಯ ಪ್ರೌಢಶಾಲೆ ಶೇ 75, ಬಿಸಲೇಹಳ್ಳಿ ಬಾಬು ನರೇಂದ್ರ ಪ್ರೌಢಶಾಲೆ ಶೇ 38.46, ಬಾಣೂರು ಬಸವೇಶ್ವರ ಪ್ರೌಢಶಾಲೆ ಶೇ.90.63, ಪಿಳ್ಳೇನಹಳ್ಳಿ ಕಲ್ಮರುಡೇಶ್ವರ ಪ್ರೌಢಶಾಲೆ ಶೇ 83.33, ದೊಡ್ಡಪಟ್ಟಣಗೆರೆ ಕಟ್ಟೆಹೊಳೆಯಮ್ಮ ಪ್ರೌಢಶಾಲೆ ಶೇ 60 ಫಲಿತಾಂಶ ಗಳಿಸಿವೆ.

ಅನುದಾನರಹಿತ ಪ್ರೌಢಶಾಲೆಗಳಲ್ಲಿ ಜೋಡಿಲಿಂಗದಹಳ್ಳಿ ಶಂಭುಲಿಂಗೇಶ್ವರ ಪ್ರೌಢಶಾಲೆ ಶೇ 57.14, ಬಳ್ಳಾವರ ಸೇಂಟ್‌ ಆನ್ಸ್‌ ಪ್ರೌಢಶಾಲೆ ಶೇ 96.88, ಬೀರೂರು ಕ್ರಮುಕ ಪ್ರೌಢಶಾಲೆ ಶೇ 100 ಫಲಿತಾಂಶಗಳಿಸಿವೆ. ಒಟ್ಟಾರೆಯಾಗಿ ಸರ್ಕಾರಿ ಪ್ರೌಢಶಾಲೆಗಳು ಶೇ 79.50, ಅನುದಾನಿತ ಶಾಲೆಗಳು ಶೇ 64.22 ಮತ್ತು ಅನುದಾನರಹಿತ ಶಾಲೆಗಳು ಶೇ 89.01 ಫಲಿತಾಂಶ ಪಡೆದಿವೆ.

ಈ ಬಾರಿ ಗಣಿತ ಪ್ರಶ್ನೆ ಪತ್ರಿಕೆ ಕಠಿಣವಾಗಿದ್ದ ಕಾರಣ ಸಾಕಷ್ಟು ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಫಲಿತಾಂಶದ ಮೇಲೂ ಪರಿಣಾಮ ವಾಗಿದೆ. ಅನುದಾನಿತ ಶಾಲೆಗಳ ಕಳಪೆ ಪ್ರದರ್ಶನಕ್ಕೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು. ಮುಂದಿನ ದಿನಗ ಳಲ್ಲಿ ಗರಿಷ್ಠ ಸಾಧನೆಗೆ ಶ್ರಮ ವಹಿಸುವುದಾಗಿ ಮೋಹನ್‌ಕುಮಾರ್‌ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಜೋಡಿಹೋಚಿಹಳ್ಳಿಯ ಮೊರಾರ್ಜಿ ವಸತಿಶಾಲೆ ವಿದ್ಯಾರ್ಥಿನಿ ಕೆ.ಎಸ್‌.ಇಂಚರ 608 ಅಂಕಗಳೊಡನೆ ಅಗ್ರಸ್ಥಾನ ಪಡೆದರೆ, ಬೀರೂರು ಕ್ರಮುಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಸ್ಕಾನ್‌ ಆಸಿಫ್‌ 614 ಅಂಕಗಳೊಡನೆ ವಲಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.