ADVERTISEMENT

ಕಳಸಾಪುರದಲ್ಲಿ ಕುಳ್ಳ–ಕುಳ್ಳಿ ಮದುವೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:20 IST
Last Updated 13 ನವೆಂಬರ್ 2017, 6:20 IST

ಚಿಕ್ಕಮಗಳೂರು: ತಾಲ್ಲೂಕಿನ ಕಳಸಾಪುರದ ವರನ ಮನೆಯಲ್ಲಿ ಭಾನುವಾರ ಕುಳ್ಳ ಹಾಗೂ ಕುಳ್ಳಿಯ ವಿವಾಹ ನೆರವೇರಿತು.

ಕಳಸಾಪುರ ಗ್ರಾಮದ 24 ವರ್ಷದ ಪುನೀತ್ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಅಯ್ಯನಹಳ್ಳಿಯ 22ರ ಪ್ರಾಯದ ಲಾವಣ್ಯ ಅವರು ಕೋಣೆ ಮುಹೂರ್ತದಲ್ಲಿ (ವರನ ಮನೆಯ ಹಾಲ್‌ನಲ್ಲಿ ನಡೆಯುವ ವಿವಾಹ) ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವಧು–ವರರಿಬ್ಬರೂ ಮೂರು ಅಡಿ ಎತ್ತರ ಇದ್ದು, ಪುನೀತ್ ಪದವಿ ವ್ಯಾಸಂಗ ಮಾಡಿದ್ದು, ಕೃಷಿಕರು.ವಧು ಲಾವಣ್ಯ ಗೃಹಿಣಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.