ADVERTISEMENT

ಕಳಸ: ಮನೆ ಮೇಲೆ ಮರ ಬಿದ್ದು ಬಾಲಕಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 9:34 IST
Last Updated 11 ಜೂನ್ 2018, 9:34 IST
ಕಳಸ ಸಮೀಪದ ಕಗ್ಗನಳ್ಳದಲ್ಲಿ ಮನೆಯ ಮೇಲೆ ಮರ ಬಿದ್ದು ಬಾಲಕಿ ಗಾಯಗೊಂಡ ದೃಶ್ಯ.
ಕಳಸ ಸಮೀಪದ ಕಗ್ಗನಳ್ಳದಲ್ಲಿ ಮನೆಯ ಮೇಲೆ ಮರ ಬಿದ್ದು ಬಾಲಕಿ ಗಾಯಗೊಂಡ ದೃಶ್ಯ.   

ಕಳಸ: ಭಾರಿ ಮಳೆ ಮತ್ತು ಗಾಳಿಯಿಂದಾಗಿ ಮನೆಯ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಬಾಲಕಿಗೆ ಗಾಯವಾದ ಘಟನೆ ಇಲ್ಲಿಗೆ ಸಮೀಪದ ಕಗ್ಗನಳ್ಳದ ಪಡೀಲು ಗ್ರಾಮದಲ್ಲಿ ಶನಿವಾರ ನಡೆದಿದೆ.

ಕೂಲಿ ಕಾರ್ಮಿಕ ಪ್ರಸಾದ್ ಮತ್ತು ಪವಿತ್ರ ದಂಪತಿಯ ಮನೆ ಮೇಲೆ ಸಮೀಪದಲ್ಲೇ ಇದ್ದ ದೊಡ್ಡ ಗಾತ್ರದ ಬೀಟೆ ಮರ ಬೆಳಗಿನ ಜಾವ ಬಿದ್ದಿದೆ. ಇದರಿಂದಾಗಿ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮನೆಯಲ್ಲಿದ್ದ 10 ವರ್ಷದ ಬಾಲಕಿ ಪ್ರಜ್ಞಾ ಮೈಮೇಲೆ ಮನೆಯ ಸಾಮಗ್ರಿಗಳು ಬಿದ್ದು ಆಕೆಯ ಕೈ ಮುರಿದಿದೆ. ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳಸ ಕಂದಾಯ ನಿರೀಕ್ಷಕ ರತ್ನಾಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಪರಿಹಾರ ದೊರಕುವ ವಿಶ್ವಾಸ ಇದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.