ADVERTISEMENT

ಕಸ್ತೂರಿ ರಂಗನ್ ವರದಿ ಜಾರಿ ಬೇಡ

ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:34 IST
Last Updated 10 ಮಾರ್ಚ್ 2017, 9:34 IST

ನರಸಿಂಹರಾಜಪುರ: ಕಸ್ತೂರಿ ರಂಗನ್ ವರದಿ ಯಥವತ್ತಾಗಿ ಜಾರಿ ಆದರೆ ಜನರ ಬದುಕು ಮೂರಾ ಬಟ್ಟೆಯಾಗಲಿದೆ ಎಂದು ಜೆಡಿಎಸ್ ರಾಜ್ಯಘಟಕದ ಉಪಾ ಧ್ಯಕ್ಷ ಎಚ್.ಟಿ.ರಾಜೇಂದ್ರ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸೋ ಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದರು. ಕೇಂದ್ರ ಸರ್ಕಾರ ಕಸ್ತೂರಿ ರಂ ಗನ್ ವರದಿ ಜಾರಿಗೆ ಆದೇಶ ಹೊರ ಡಿಸಿರುವುದು ಪಶ್ಚಿಮಘಟ್ಟ ಪ್ರದೇಶದ ಜನರ ಮೇಲೆ ಗದಪ್ರಹಾರ ನಡೆಸಿದಂತೆ. ಈ ಭಾಗದ ಸಂಸದೆ ಶೋಭಾ ಕರಂ ದ್ಲಾಜೆ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ, ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆಗಟ್ಟಲು ಅವರ ಪ್ರಯತ್ನವೇನು? ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಸಂಸತ್ತಿನಲ್ಲಿ ಸಂಬಂಧಪಟ್ಟ ಮಂತ್ರಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ. ರಾಜ್ಯ ಸರ್ಕಾರ ಸಹ ತನ್ನ ಪಾತ್ರ ನಿರ್ವಹಿಸುವಲ್ಲಿ ವಿಫಲವಾಗಿದೆ. ಹೀಗಾಗಿ, ಈ  ವ್ಯಾಪ್ತಿಯ ಶಾಸಕರು, ಸಂಸದರು ಕೂಡಲೇ ರಾಜೀನಾಮೆ ನೀಡಿ ಸರ್ಕಾರದ ಮೇಲೆ ವರದಿ ಜಾರಿಯಾಗದಂತೆ ಒತ್ತಡ ತರಬೇಕೆಂದು ಆಗ್ರಹಿಸಿದರು.

ಜನಜಾಗೃತಿ, ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಬೇಕು. ಯಡಿಯೂರಪ್ಪ ಅವರು ಪ್ರಧಾನಿ ಅವರ ಬಳಿ ಮಾತನಾಡುವ ನಾಟಕದ ಮಾತು ಬಿಟ್ಟು ನಿಜವಾದ ಕಾಳಜಿ ವಹಿಸಬೇಕು. ಜೆಡಿಎಸ್‌ನಿಂದ ಇದೇ 7ರಂದು ಕೊಪ್ಪ, 11ರಂದು ಎನ್.ಆರ್. ಪುರ ಹಾಗೂ 13ರಂದು ಶೃಂಗೇರಿಯಲ್ಲಿ ತಹಶೀಲ್ದಾರ್ ಮೂಲಕ ವರದಿ ಜಾರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗುವುದು. ಈ ವಿಚಾ ರದಲ್ಲಿ ಜೆಡಿಎಸ್ ಬೃಹತ್ ಹೋರಾಟ ರೂಪಿಸಲಿದೆ ಎಂದರು.
 
ಸರ್ಕಾರಗಳು ಹೊಸ ಯೋಜನೆ ಜಾರಿಗೆ ತರವುದರ ಬದಲು ಇರುವ ಕಾಡಿಗೆ ಬೆಂಕಿ ಬೀಳದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿ ಹೋಬಳಿಗೊ 5 ಅಗ್ನಿಶಾಮಕ ವಾಹನ ನೀಡಬೇಕು ಎಂದರು.  ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹೊಸೂರು ಸುರೇಶ್, ಮುಖಂ ಡರಾದ ಶಿವದಾಸ್, ಎಂ.ಓ.ಜೋಯ್, ಸತ್ಯನಾರಾಯಣ ಶೆಟ್ಟಿ, ಕೆ.ಟಿ. ಚಂದ್ರು, ವರ್ಕಾಟೆ ಸುಧಾಕರ್, ನಾಗಭೂಷಣ್ ಇದ್ದರು.

*
ಕಸ್ತೂರಿರಂಗನ್ ಸಮಿತಿಯಲ್ಲಿ ಈ ಭಾಗದ ಯಾವುದೇ ಸದಸ್ಯರಿಲ್ಲ. ಸದಸ್ಯರಾಗಿರುವವರಿಗೆ ಮಲೆನಾಡಿ ಭಾಗದ ರೈತರ ಸಮಸ್ಯೆಯ ಬಗ್ಗೆಯೂ ಅರಿವಿಲ್ಲ.
-ಎಚ್.ಟಿ.ರಾಜೇಂದ್ರ,
ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT