ADVERTISEMENT

‘ಕೃಷಿ ಉಳಿದುಕೊಳ್ಳಲು ರೈತ ಮಹಿಳೆ ಕಾರಣ’

ಮಹಿಳಾ ಸ್ವಾವಲಂಬನೆಗೆ ಇರುವ ಅವಕಾಶಗಳು ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:46 IST
Last Updated 18 ಜನವರಿ 2017, 5:46 IST
‘ಕೃಷಿ ಉಳಿದುಕೊಳ್ಳಲು ರೈತ ಮಹಿಳೆ ಕಾರಣ’
‘ಕೃಷಿ ಉಳಿದುಕೊಳ್ಳಲು ರೈತ ಮಹಿಳೆ ಕಾರಣ’   

ಮುತ್ತಿನಕೊಪ್ಪ(ಎನ್.ಆರ್.ಪುರ): ಪ್ರಸ್ತುತ ದಿನಗಳಲ್ಲಿ ಕೃಷಿ ಉಳಿದು ಕೊಂಡಿದ್ದರೆ  ಅದು ರೈತ ಮಹಿಳೆಯ ರಿಂದಲೇ ಎಂದು ಬೆಳ್ತಂಗಡಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್ ತಿಳಿಸಿದರು.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ದಲ್ಲಿ ಭಾನುವಾರ ನಡೆದ ಕೃಷಿ ಉತ್ಸವ ದಲ್ಲಿ  ‘ಬದಲಾಗುತ್ತಿರುವ ಸಮಾಜದಲ್ಲಿ ಮಹಿಳಾ ಸ್ವಾವಲಂಬನೆಗೆ ಇರುವ ಅವ ಕಾಶಗಳು’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೃಷಿಯೊಂದಿಗೆ ಎಲ್ಲವೂ ಬದಲಾಗು ತ್ತಿದ್ದು, ಬದಲಾಗುವ ಪ್ರಪಂಚಕ್ಕೆ ಒಗ್ಗಿಕೊ ಳ್ಳದಿದ್ದರೆ ಹಿಂದುಳಿಯಬೇಕಾಗುತ್ತದೆ. ಮಹಿಳಾ ಸ್ವಾವಲಂಬನೆ 2ದಶಕಗಳ ಹಿಂದೆ ಯಾರಿಗೂ ಬೇಡವಾದ ವಿಚಾರ ವಾಗಿತ್ತು. ಮನೆವಾರ್ತೆ, ಮಕ್ಕಳ ಲಾಲನೆ, ಪಾಲನೆ, ಸಂಸ್ಕೃತಿ ಹಂಚುವ ಕೆಲಸಕ್ಕೆ ಸೀಮಿತವಾಗಿತ್ತು. ಗೃಹಿಣಿಯರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಹಿಳೆಯರು ಆತ್ಮವಿಶ್ವಾಸದಿಂದ ಜೀವನ ಮಾಡುವಂತಾಗಬೇಕು ಎಂದರು.

ಸಣ್ಣ ಜಮೀನುದಾರರು, ಕೃಷಿಕರಲ್ಲ ದವರು, ಶಿಕ್ಷಣ ಇಲ್ಲದ ಮಹಿಳೆಯರಿಗೂ ಗ್ರಾಮಾಭಿವೃದ್ಧಿ ಯೋಜನೆ ನೆರವು ನೀಡುವ ಕೆಲಸವನ್ನು ಸಂಸ್ಥೆ ಮಾಡು ತ್ತಿದ್ದು, ಮಹಿಳೆಯರು ಪಡೆದ ಸಾಲವನ್ನು ಉತ್ಪಾದನೆ ಅಥವಾ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ನೇರವಾಗಿ ಗ್ರಾಹಕರಿಗೆ ಉತ್ಪನ್ನವನ್ನು ಮಾರಾಟ ಮಾಡಬೇಕು. ಇದರಿಂದ ಗ್ರಾಹಕರ ನಿರೀಕ್ಷೆ, ಉತ್ಪನ್ನದ ಪರಿಚಯವಾಗುತ್ತದೆ.  ಮಹಿಳೆಯರು ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸಬೇಕು. ಮಕ್ಕಳಿಗೆ ಬದು ಕನ್ನು ಕಟ್ಟಿಕೊಡುವ ಕೌಶಲವನ್ನು ನೀಡಬೇಕು ಎಂದರು.

ಕಾನೂನು ಶ್ರೀನಿಧಿ ಪ್ರಗತಿ ಬಂಧು ಸ್ವಸಹಾಯ ಸಂಘದ ಇಂದಿರಾ ಅವರು ತಾವು ಸ್ವಾವಲಂಬಿಯಾದ ಬಗ್ಗೆ ಅನು ಭವ ಹಂಚಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ ನಾಗರಾಜ್ ವಹಿಸಿ ಮಾತನಾಡಿದರು.

ಸಭೆಯಲ್ಲಿ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಡೈಸಿ, ವನಜಾಕ್ಷಿ, ಜ್ಞಾನವಿಕಾಸ ಸಮನ್ವಯಾ ಧಿಕಾರಿ ಎನ್.ಶಕುಂತಳಾ, ಶಿಲ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.