ADVERTISEMENT

ಜಂಟಿ ಸರ್ವೆ ಬಳಿಕ ತೀರ್ಮಾನ

ನಿರಾಶ್ರಿತರಿಗೆ ನಿವೇಶನ: ಅಧಿಕಾರಿಗಳಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 9:16 IST
Last Updated 4 ಆಗಸ್ಟ್ 2015, 9:16 IST

ಹೇರೂರು (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಜಲದುರ್ಗ, ದೂಬಳ ಹಾಗೂ ಸೀಗೋಡು ಗ್ರಾಮದಲ್ಲಿ ನಿವೇ ಶನ ರಹಿತರು ನಿರ್ಮಿಸಿರುವ ಗುಡಿಸಲು ಗಳು ಯಾವ ಇಲಾಖೆ ವ್ಯಾಪ್ತಿಗೆ ಒಳಪಡ ಲಿದೆ ಎಂಬ ಬಗ್ಗೆ ಕಂದಾಯ, ಅರಣ್ಯ ಇಲಾಖೆಗಳು ಜಂಟಿಯಾಗಿ ಸರ್ವೇ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗು ವುದು ಎಂದು ಉಪ ವಿಭಾಗಾಧಿಕಾರಿ ರಾಮಚಂದ್ರನ್ ತಿಳಿಸಿದರು.

ಹೇರೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಿವೇಶನ ರಹಿತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಜಾಗ ಮಂಜೂರು ಕುರಿತು ಸಾಕಷ್ಟು ಕಾನೂನು ಪ್ರಕ್ರಿಯೆ ಗಳಿವೆ. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ನೀಡುವ ವರದಿ ಆಧಾರದಲ್ಲಿ ನಿರಾಶ್ರಿತ ರಿಗೆ ಮನೆಜಾಗ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

ಚಿಕ್ಕಮಗಳೂರು ಪಟ್ಟಣಕ್ಕೆ ಇತ್ತೀಚೆಗೆ ಚಿರತೆ ನುಗ್ಗಿ ಮನುಷ್ಯರ ಮೇಲೆ ದಾಳಿ ನಡೆಸಿದೆ. ಇಲ್ಲಿ ಅರಣ್ಯದ ನಡುವೆ ಗುಡಿಸಲು ನಿರ್ಮಿಸಿದ್ದು ಅಲ್ಲಿ ಮಕ್ಕಳು ಮಹಿಳೆಯರು ವಾಸವಾಗಿದ್ದಾರೆ. ಹಾವು ಚೇಳು ಮನುಷ್ಯರಿಗೆ ಕಚ್ಚಿ ತೊಂದರೆ ಉಂಟಾಗಬಹುದಾದ ಕಾರಣ ಅಲ್ಲಿದ್ದ ಗುಡಿಸಲು ತೆರವುಗೊಳಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ನಿವೇಶನ ರಹಿತರ ಹೋರಾಟ ಸಮಿತಿ ಕಾರ್ಯದರ್ಶಿ ರಾಮು ಕೌಳಿ ಮಾತನಾಡಿ, 15–20 ವರ್ಷಗಳಿಂದ ನಿವೇಶನಗಳ ಹಂಚಿಕೆ ನಡೆದಿಲ್ಲ. ಇದರ ಪರಿಣಾಮ ಬಡವರು, ಕೂಲಿ ಕಾರ್ಮಿಕ ರಿಗೆ ಸೂರಿಲ್ಲದಂತಾಗಿದೆ. ಎಲ್ಲ ನಿವೇಶನ ರಹಿತರಿಗೂ ಸೂಕ್ತ ಜಾಗ ನೀಡುವಂತೆ ಆಗ್ರಹಿಸಿದರು.

ಜಿಲ್ಲಾ  ಪಂಚಾಯತಿ ಸದಸ್ಯ ಕುಕ್ಕೋಡಿಗೆ ರವೀಂದ್ರ ಮಾತನಾಡಿ, ಗ್ರಾಮ ಪಂಚಾಯಿತಿಗಳು ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಿ ಸೂಕ್ತ ಜಾಗವನ್ನು ಗುರುತಿಸಿ ಕಂದಾಯ ಇಲಾಖೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿವೆ. ಆದರೆ, ಕಂದಾಯ ಹಾಗೂ ಅರಣ್ಯ ಇಲಾಖೆಯಲ್ಲಿನ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಎರಡು ಮೂರು ವರ್ಷ ಕಳೆದರೂ ಪಂಚಾಯಿತಿ ಗಳಿಗೆ ಸೌಜನ್ಯಕ್ಕೂ ಉತ್ತರಿಸುತ್ತಿಲ್ಲ. ಇದರ ಪರಿಣಾಮ ನಿವೇಶನ ರಹಿತರು  ಹೋರಾಟಕ್ಕಿಳಿದಿದ್ದಾರೆ ಎಂದರು.

ಡಿಸಿಎಫ್‌ ಮಾಲತಿ ಪ್ರಿಯ ಮಾತನಾಡಿ, ಸೀಗೋಡು ಸಮೀಪದಲ್ಲಿ  ಗಿಡ ಮರಗಳನ್ನು ಕಡಿದು ನಿರ್ಮಿಸಿರುವ ಗುಡಿಸಲುಗಳನ್ನು ನೋಡಿದೆ. ಪ್ರಕೃತಿ ನಾಶವಾಗುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದರು.

ಕೊಪ್ಪ ತಾಲ್ಲೂಕು ಪಂಚಾಯಿತಿ ಇಒ ರೇಖಾ, ಅಧ್ಯಕ್ಷೆ ಪ್ರೇಮಾ ದಾಮೋದರ ಶೆಟ್ಟಿ, ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಿನಿ, ಎಸಿಎಫ್‌ ಶ್ರೀನಿವಾಸ ರೆಡ್ಡಿ, ತಿಪ್ಪೇರುದ್ರಪ್ಪ, ಸಿಪಿಐ ಕೃಷ್ಣಮೂರ್ತಿ, ಕೊಪ್ಪ ತಹಶೀಲ್ದಾರ್‌ ಪುರುಷೋತ್ತಮ, ಕಂದಾಯ ನಿರೀಕ್ಷಕ ಶೇಷಮೂರ್ತಿ, ಪಂಚಾಯಿತಿ ಸದಸ್ಯರಾದ ಡಿ.ಎನ್. ಜಗದೀಶ್, ಸಂಜೀವ ಪೂಜಾರಿ, ಸಿ.ಯು.ನಟರಾಜ್, ಕಾರಗದ್ದೆ ಚಂದ್ರೇ ಗೌಡ, ಮೇಗುಂದಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಬಸರೀಕಟ್ಟೆ, ಕಾರಗದ್ದೆ ಚಂದ್ರೇಗೌಡ, ಸುಕುಮಾರ್, ಕೆ.ಆರ್. ಪಾಂಡುರಂಗ, ಎಚ್.ಎಸ್‌. ಬಾಲ ಚಂದ್ರ, ಸಂತೋಷ್ ಅರೇನೂರು, ರವಿ ‌ಇದ್ದರು.

ಆಶ್ರಯ ಅದಾಲತ್ ನಡೆಸಲು ಸಲಹೆ
ಈ ಹಿಂದೆ ಕಂದಾಯ ಅದಾಲತ್ ನಡೆಸಿದಂತೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಜಿಲ್ಲಾಡಳಿತ ‘ಆಶ್ರಯ ಅದಾಲತ್’ ನಡೆಸುವಂತೆ ಕೊಪ್ಪ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಸತೀಶ್ ಸಲಹೆ ನೀಡಿದರು.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲೂ ಎರಡು ಎಕರೆ ಆಶ್ರಯ ಲೇಔಟ್ ನಿರ್ಮಾಣಕ್ಕೆ ಜಾಗ ಮೀಸಲಿರಿಸಲು ತೀರ್ಮಾನ ಕೈಗೊಂಡು ವರದಿ ನೀಡಲಾಗಿದೆ. ಆದರೆ, ವರದಿ ಅನುಷ್ಠಾನ ಗೊಂಡಿಲ್ಲ. ಇದೆ ಪರಿಣಾಮ ಜನ ಹತಾಶರಾಗಿ ಹಿಡುವಳಿ ಹಾಗೂ ಅರಣ್ಯ, ಕಂದಾಯ ಇಲಾಖೆ  ಜಾಗ ಗಳಿಗೂ ಬೇಲಿ ಹಾಕುತ್ತಿದ್ದಾರೆ. ಇದೀಗ ತಾತ್ಕಾಲಿಕ ನಿರ್ಮಿಸಿದ ಗುಡಿಸಲು ಏನಾದರೂ ಪ್ರಾಕೃತಿಕ ಅನಾಹುತ ನಡೆದು ಜೀವ ಹಾನಿಯಾ ದಲ್ಲಿ ಜಿಲ್ಲಾಡಳಿತ ಹೊಣೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT