ADVERTISEMENT

ಪಲ್ಸ್ ಪೋಲಿಯೊ ಮಾದರಿಯಲ್ಲಿ ಕಾರ್ಯಕ್ರಮ

ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:58 IST
Last Updated 22 ಏಪ್ರಿಲ್ 2017, 5:58 IST
ನರಸಿಂಹರಾಜಪುರ: ‘ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ನಿರ್ಮೂ ಲನೆಗೆ ಸರ್ಕಾರ ಪಲ್ಸ್ ಪೋಲಿಯೊ  ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದೆ’ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಸದಾಶಿವ ಹೇಳಿದರು.
 
ಇಲ್ಲಿನ ಪಶುವೈದ್ಯಕೀಯ ಆಸ್ಪತ್ರೆ ಯಲ್ಲಿ ಮಂಗಳವಾರ 12ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
 
‘ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ ನಮ್ಮದಾ ಗಿದ್ದರೂ ವಿದೇಶದಲ್ಲಿ ಹಾಲಿಗೆ ಬೇಡಿಕೆ ಕಡಿಮೆ ಇದ್ದು ಹಾಲು ರಫ್ತಾಗುತ್ತಿಲ್ಲ. ಇದಕ್ಕೆ ಕಾಲುಬಾಯಿ ಜ್ವರ ಕಾರಣವಾಗಿದ್ದು, ಕಾಲುಬಾಯಿ ಜ್ವರ ಮುಕ್ತ ರಾಷ್ಟ್ರವನ್ನಾಗಿ ಮಾಡಿದರೆ ಹಾಲಿಗೆ ಬೇಡಿಕೆಯೂ ಹೆಚ್ಚಲಿದ್ದು, ಇದರಿಂದ ಪಶುಸಂಗೋಪನೆಯಲ್ಲಿ ತೊಡಗಿದವರ ಆದಾಯವೂ ವೃದ್ಧಿಯಾಗಲಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಾನುವಾರು ಸಾಕಣೆ ಮಾಡುವ ಪ್ರತಿಯೊಬ್ಬರೂ ಜಾನುವಾ ರುಗಳಿಗೆ ಲಸಿಕೆಯನ್ನು ಹಾಕಿಸಿ ಸರ್ಕಾರದ ಕಾರ್ಯಕ್ರಮ ಯಶಸ್ವಿಗೊ ಳಿಸಬೇಕು ಎಂದರು.     
 
ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ್ ಮಾತ ನಾಡಿ, ‘ಜಾನುವಾರುಗಳಲ್ಲಿ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ವರ್ಷಕ್ಕೆ 2 ಬಾರಿಯಂತೆ 6 ತಿಂಗಳಿಗೊಮ್ಮೆ ಲಸಿಕೆ ಹಾಕಲಾಗುತ್ತಿದ್ದು, ಕಳೆದ ಸುತ್ತಿನಲ್ಲಿ 27ಸಾವಿರಕ್ಕೂ ಅಧಿಕ ಜಾನುವಾರುಗಳಿಗೆ ಲಸಿಕೆ ಹಾಕಿ ಶೇ 90ಕ್ಕೂ ಅಧಿಕ ಗುರಿ ಸಾಧಿಸಲಾಗಿತ್ತು.

ಲಸಿಕಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಇದ್ದು, ಮೂರು ತಂಡ ರಚನೆ ಮಾಡಿ ಪ್ರತಿಯೊಂದು ತಂಡಕ್ಕೂ ಒಬ್ಬ ವೈದ್ಯರನ್ನು ನೇಮಿಸಲಾಗುತ್ತದೆ. ಪ್ರತಿ ಯೊಬ್ಬರು ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸ ಬೇಕು’ ಎಂದು ಮನವಿ ಮಾಡಿದರು.
 
ಅಧ್ಯಕ್ಷತೆಯನ್ನು ಪಟ್ಟಣ ಪಂಚಾ ಯಿತಿ ಅಧ್ಯಕ್ಷ ಆರ್.ರಾಜಶೇಖರ್ ವಹಿಸಿ ಮಾತನಾಡಿದರು. ಕಟ್ಟಿನ ಮನೆ ಗ್ರಾಮದ ಪಶುವೈದ್ಯ ಡಾ.ರಾಕೇಶ್ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಮುತ್ತಿನ ಕೊಪ್ಪ ಡಾ.ಪ್ರವೀಣ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.