ADVERTISEMENT

ಬಜೆಟ್‌ನಲ್ಲಿ ರೈತರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 7:54 IST
Last Updated 18 ಮಾರ್ಚ್ 2017, 7:54 IST

ಚಿಕ್ಕಮಗಳೂರು: ರಾಜ್ಯದಲ್ಲಿ ತೀವ್ರವಾದ ಬರಗಾಲ ವ್ಯಾಪಿಸಿದ್ದು, ರೈತರು ಆರ್ಥಿಕ ಸಂಕಷ್ಟದಿಂದ ಸರಣಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಸಾಲಮನ್ನಾ ಮಾಡದೆ ರೈತ ಸಮೂಹಕ್ಕೆ ಅನ್ಯಾಯ ಮಾಡಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್ ದೇವರಾಜ್ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬಹುದು ಎಂದು ಅನ್ನದಾತರು ಕಾತುರದಿಂದ ಕಾಯುತ್ತಿ ದ್ದರು. ಆದರೆ, ಸಿದ್ದರಾಮಯ್ಯ ಸಾಲ ಮನ್ನಾ ಮಾಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಜಿಲ್ಲೆಗೆ ನೀಡಿರುವ ಮೆಡಿಕಲ್ ಕಾಲೇಜ್, ಐಟಿಐ ಕಾಲೇಜ್, ರಕ್ತ ನಿಧಿ ಇವುಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ರೈತರ ಸಾಲಮನ್ನಾ ಮಾಡಿಲಿ ಎಂದು ಆಗ್ರಹಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ರಾಜ್ಯದ ಬಿಜೆಪಿ ನಾಯಕರು ಭೇಟಿ ನೀಡದಿರುವುದು ನೋಡಿದರೆ ರೈತರ ಬಗ್ಗೆ ಬರಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎನ್ನುವುದು ದೃಢವಾಗು ತ್ತಿದೆ. ರಾಜ್ಯದ ಬಿಜೆಪಿ ಸಂಸದರು ಪ್ರಧಾನಮಂತ್ರಿಗಳ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿಸ ಬೇಕು ಎಂದರು.

ADVERTISEMENT

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಜ್ಜಂ ಪುರ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರ ಮಾಡಿರುವುದು ಸ್ವಾಗತಾರ್ಹ. ಆದರೆ, ಹಲವು ವರ್ಷಗಳಿಂದ ಕಳಸ ವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎನ್ನುವ ಬೇಡಿಕೆಯನ್ನು ಪರಿಗಣಿಸದಿರು ವುದನ್ನು ಜೆಡಿಎಸ್ ಖಂಡಿಸುತ್ತದೆ ಎಂದರು.

ಕಸ್ತೂರಿ ರಂಗನ್ ವರದಿ ಆಧಾರ ದಲ್ಲಿ ಜಿಲ್ಲೆಯ 147 ಹಳ್ಳಿಗಳು ಅತೀ ಸೂಕ್ಷ್ಮ  ಪ್ರದೇಶಪಟ್ಟಿಗೆ ಸೇರಿವೆ. ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಅವರ ಕ್ಷೇತ್ರದಲ್ಲಿನ 70 ಹಳ್ಳಿಗಳು ಹಾಗೂ ಸಿ.ಟಿ ರವಿ ಅವರ ಕ್ಷೇತ್ರದ 24 ಹಳ್ಳಿಗಳು ಸೇರಿವೆ. ಇಬ್ಬರು ಶಾಸಕರು ಇದರ ಬಗ್ಗೆ ಚಕಾರ ಎತ್ತಿಲ್ಲ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿ ದ್ದರೂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ. ಬಾಬಾ ಬುಡನ್‌ಗಿರಿಯಲ್ಲಿ ಸೌಹಾರ್ದಯುತವಾಗಿ ಉರೂಸ್ ನಡೆ ಯಬೇಕು. ಸರ್ಕಾರದ ನಿರ್ಲಕ್ಷ್ಯ್ಯ ಧೋರ ಣೆಯಿಂದ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಡಿ.ಎನ್. ಜೀವರಾಜ್ ಆಣೆ ಪ್ರಮಾಣ ವನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ವಂದಿಸಬೇಕು. ಜನರು ಆಯ್ಕೆ ಮಾಡಿರು ವುದು ಆಣೆ ಪ್ರಮಾಣ ಮಾಡಲು ಅಲ್ಲ, ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚಂದ್ರಪ್ಪ, ಎಚ್.ಎಸ್. ಮಂಜಪ್ಪ, ಹೊಲ ದಗದ್ದೆ ಗಿರೀಶ್, ಮುಕ್ತಿಯಾರ್ ಅಹ ಮದ್, ಜಮೀರ್, ನಾಗೇಶ್ ಇದ್ದರು.

**

ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಾಬಾಬುಡನ್‌ ಗಿರಿ ಸಮಸ್ಯೆಯನ್ನು ಸೌಹಾರ್ದಯುತ ವಾಗಿ ಬಗೆಹರಿಸಲಾಗುವುದು.
–ಎಚ್.ಎಚ್ ದೇವರಾಜ್
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.