ADVERTISEMENT

ಬಾಳೆಹೊನ್ನೂರು ಪ್ರೀಮಿಯರ್ ಲೀಗ್: ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 7:14 IST
Last Updated 16 ಏಪ್ರಿಲ್ 2017, 7:14 IST

ಬಾಳೆಹೊನ್ನೂರು: ‘ಪಟ್ಟಣದ ಕಾಫಿಲ್ಯಾಂಡ್ ಕ್ರಿಕೆಟ್ ಕ್ಲಬ್‌ವತಿಯಿಂದ ಇದೇ 15ರಿಂದ 24ರವರೆಗೆ ಬಸ್ ನಿಲ್ದಾಣ ಹಿಂಭಾಗದ ಕಲಾರಂಗ ಕ್ರೀಡಾಂಗಣದಲ್ಲಿ  ಬಾಳೆ ಹೊನ್ನೂರು ಪ್ರೀಮಿಯರ್ ಲೀಗ್ (ಬಿಪಿಎಲ್) ಕ್ರಿಕೆಟ್ ಪಂದ್ಯಾವಳಿ ನಡೆಯ ಲಿದೆ’ ಎಂದು ಕಾಫಿ ಲ್ಯಾಂಡ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ಇದು ಜಿಲ್ಲೆಯಲ್ಲೇ  ಹೊಸ ಪ್ರಯೋಗವಾಗಿದ್ದು, ಎಂಟು ತಂಡಗಳು ಭಾಗವಹಿಸಲಿವೆ. ಶೃಂಗೇರಿ ವಿಧಾನಸಭಾ ಕ್ಷೇತದ ಕ್ರಿಕೆಟ್ ಆಟಗಾರರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಉದ್ದೇಶ ದಿಂದ ಬಿಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ’ ಎಂದರು.

‘ಆರಂಭದಲ್ಲಿ ಕ್ಷೇತ್ರದ ಉತ್ತಮ ಆಸಕ್ತ 150 ಜನ ಕ್ರಿಕೆಟ್ ಆಟಗಾರರನ್ನು ಕಾಫಿ ಲ್ಯಾಂಡ್ ಕ್ರಿಕೆಟ್ ಕ್ಲಬ್  ನೊಂದಾಯಿಸಿ ಕೊಂಡಿತ್ತು. ಪ್ರಮುಖವಾಗಿ ಗ್ರೀನ್ ವಾರಿ ಯರ್ಸ್ ತಂಡದ ಮಾಲಿಕ ಕೆ.ಆರ್.ಶ್ಯಾಮ್ ಸುಂದರ್, ಬೈರೇಗುಡ್ಡ ಬುಲ್ಸ್ ತಂಡದ ಮಾಲೀಕ ಮೊಹಮ್ಮದ್ ಶಹಾಬ್, ರಾಯಲ್ ಇಂಡಿಯನ್ಸ್ ತಂಡದ ಮಾಲೀಕ ಪೀಟರ್ ಲಿಗೋರಿ ಸಿಕ್ವೇರಾ, ಇಂಫಾಲ ಬಗ್ಗುಂಜಿ ಟೈಗರ್ಸ್ ತಂಡದ ಮಾಲೀಕ ಮಹಮ್ಮದ್ ಜಮೀರ್, ಭದ್ರಾ ಬ್ಲಾಕ್ ಪ್ಯಾಂಥರ್ಸ್ ತಂಡದ ಮಾಲೀಕ ಬಿ.ಎನ್.ಭಾಸ್ಕರ್, ನಮನ ಅವೆಂಜರ್ಸ್ ತಂಡದ ಮಾಲೀಕ ಮನು ಕುಮಾರ್, ಸೋಲಿಹ ಬ್ರಿಗೇಡರ್ಸ್ ತಂಡದ ಮಾಲೀಕ ಮಹಮ್ಮದ್ ರಫೀಕ್ ಹಾಗೂ ಮಲ್ನಾಡ್ ಗ್ಲಾಡಿಯೇಟರ್ಸ್ ತಂಡದ ಮಾಲೀಕ ಮಹಮ್ಮದ್ ಹನೀಫ್ ನೇತೃತ್ವದ ಪ್ರಾಂಚೈಸಿ ಗಳು ಆಟಗಾರರನ್ನು ಉಚಿತ ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಿಕೊಂಡಿದ್ದಾರೆ.

ಶೃಂಗೇರಿ ವಿಧಾನ ಸಭಾ ಕ್ಷೇತ್ರದ 7 ಜನ ಆಟಗಾರರನ್ನು ನೇಮಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದು, ಉಳಿದ ನಾಲ್ವರು ಆಟಗಾರರನ್ನು ರಾಷ್ಟ್ರದ ಯಾವುದೇ ಮೂಲೆಯಿಂದ ಬೇಕಾದರೂ ಕರೆತರಬಹು ದಾಗಿದೆ. ಆದ್ದರಿಂದ ತಮಿಳುನಾಡಿನಲ್ಲಿ ಪ್ರೀಮಿಯಮ್ ಲೀಗ್  ಪಂದ್ಯದಲ್ಲಿ ಭಾಗವಹಿಸಿದ್ದ ಆಟಗಾರರು ಹಾಗೂ ಮಹಾರಾಷ್ಟ್ರದ ವಿದರ್ಭದಲ್ಲಿ ಆಡಿದ ಖ್ಯಾತ ಆಟಗಾರರು ಇಲ್ಲಿನ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಸಿಎಲ್‌ಸಿ ತಂಡದ ಸಿಇಒ ಟಿ.ಎಂ.ಉಮೇಶ್ ಮಾತನಾಡಿ, ‘ಪ್ರತಿ ತಂಡಕ್ಕೂ ವಿಶಿಷ್ಟ ಬಣ್ಣದ ಡ್ರಸ್ ಕೋಡ್ ಇದ್ದು ,ಇದೇ ಮೊದಲಬಾರಿಗೆ ಬಾಳೆ ಹೊನ್ನೂರಿನಲ್ಲಿ ವೈಟ್ ಬಾಲ್, ಪುಲ್ ಮ್ಯಾಟ್ ಪಂದ್ಯಾವಳಿ ನಡೆಯಲಿದೆ. ಭಾನು ವಾರ ಸಂಜೆ 5 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಟ್ರೋಫಿ ಅನಾವರಣಗೊಳಿಸಲಿದ್ದು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಡಿ.ಎನ್. ಜೀವರಾಜ್, ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.