ADVERTISEMENT

ಮನಮುಟ್ಟುವಂತೆ ಕಾರ್ಯ ಮಾಡಬೇಕು

ಸಾಧಕರಿಗೆ ಸನ್ಮಾನ: ನರಸಿಂಹ ನಾಯಕ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:48 IST
Last Updated 25 ಮೇ 2017, 5:48 IST

ಶೃಂಗೇರಿ: ಜನ ಸಾಮಾನ್ಯರ ಸೇವೆಗೆ ಸಮಯ ಮೀಸಲಿಡಬೇಕು. ಜತೆಗೆ ನಾವು ಮಾಡುವ ಕೆಲಸವು ಮನಸ್ಸಿಗೆ ಮುಟ್ಟುವಂತೆ ಇರಬೇಕು ಎಂದು ಉಡುಪಿ ಜಿಲ್ಲೆಯ ಸಾಣೂರು ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ನಾಯಕ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ತಾಲ್ಲೂಕು ಪಂಚಾಯಿತಿ ಬುಧವಾರ ಆಯೋಜಿಸಿದ್ದ ‘ಗ್ರಾಮ ಪಂಚಾ ಯಿತಿ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಯಾವುದೇ ಅಭಿವೃದ್ಧಿ ಕಾರ್ಯ ನಿರ್ವಹಣೆಯಲ್ಲಿ ಯೋಜನೆಗಳು ಮುಖ್ಯ ಪಾತ್ರ ವಹಿಸುತ್ತದೆ.  ರಾಜಕೀಯ ಸವಾ ಲಿನ ಕ್ಷೇತ್ರ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳು ಬದಲಾವಣೆ ಹರಿಕಾರರಾಗಬೇಕು. ನಾವು ಮನು ಷ್ಯರು. ಒಂದು ಕಾರ್ಯಕ್ರಮವನ್ನು ಆಯೋಜಿಸುವಾಗ ಕುತೂಹಲ, ಅಸಡ್ಡೆ, ಉತ್ಸಾಹ ಮುಂತಾದ ಸಮ್ಮಿಶ್ರ ಭಾವ ಇರುತ್ತವೆ. ಗ್ರಾಮ ಪಂಚಾಯಿತಿ ಸದ ಸ್ಯರು ಊರಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್ ಮಾತನಾಡಿ‘ ತಾಲ್ಲೂಕು ಪಂಚಾಯಿತಿಯಲ್ಲಿ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ. ಇದರ ಪ್ರಯುಕ್ತ ತಾಲ್ಲೂಕಿನ ಒಂಭತ್ತು ಗ್ರಾಮ ಪಂಚಾಯಿತಿ ಜನಪ್ರತಿನಿ ಧಿಗಳು,ಪಿ.ಡಿ.ಒ ಹಾಗೂ ಅಧಿಕಾರಿಗಳಿಗೆ ಸಾರ್ವಜನಿ ಕರೊಂದಿಗೆ ಉತ್ತಮ ಸಂಬಂಧ ಹೊಂದಿಕೊಳ್ಳುವ ಕಾರ್ಯಾ ಗಾರ ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾ ಯಿತಿ ಸದಸ್ಯೆ ಶಿಲ್ಪಾರವಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸೇವಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಶಿವಶಂಕರ್, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ದೈಹಿಕ ಶಿಕ್ಷಕರಾದ ಸಿದ್ಧರಾಜು, ಚಂದ್ರ ಶೇಖರ್,ನೆಮ್ಮಾರಿನ ಶಿಕ್ಷಕಿ ಸಾವಿತ್ರಿ ಅವರನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸನ್ಮಾನಿಸಿದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ, ಉಪಾಧ್ಯಕ್ಷೆ ಚಂದ್ರಮತಿ ತಿಮ್ಮಪ್ಪ, ಸದಸ್ಯರಾದ ಕೆ.ಆರ್.ವೆಂಕಟೇಶ್,ಪ್ರವೀಣ್,ಪದ್ಮನಾಭಹೆಗಡೆ,ಕೆ.ಎಸ್.ರಮೇಶ್,ರೇಖಾ, ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಭಾಗವಹಿಸಿದರು.ಸುಮಾರು 150ಕ್ಕೂ ಹೆಚ್ಚು ಜನರು ಕಾರ್ಯಾಗಾರದ ಸದು ಪಯೋಗ ಪಡೆದುಕೊಂಡರು.

*
ಹಾಲು ಕಾಯಿಸುವಾಗ ಸಹಜವಾಗಿ ಕೆನೆ ಬರುತ್ತದೆ. ಹಾಲನ್ನು ನಾವು ಕುಡಿಯಲು ಬಳಸುತ್ತೇವೆ. ಕೆನೆಯಿಂದ ಸಾಕಷ್ಟು ಉಪಯೋಗವಿದೆ.
-ನರಸಿಂಹ ನಾಯಕ್,
ಉಡುಪಿ ಜಿಲ್ಲೆಯ ಸಾಣೂರು, ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT