ADVERTISEMENT

ಮಾನವೀಯತೆ ಮೆರೆದ ರಂಗೇನಹಳ್ಳಿ ಮುಸ್ಲಿಂ ಯುವಕರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:41 IST
Last Updated 10 ಸೆಪ್ಟೆಂಬರ್ 2017, 8:41 IST
ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿಯ ಮುಸ್ಲಿಂ ಯುವಕರು ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರವಾಗಿ ಧನ ಮತ್ತು ಧಾನ್ಯಗಳನ್ನು ಸಂಗ್ರಹಿಸಿ ನೀಡಿದರು.
ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿಯ ಮುಸ್ಲಿಂ ಯುವಕರು ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರವಾಗಿ ಧನ ಮತ್ತು ಧಾನ್ಯಗಳನ್ನು ಸಂಗ್ರಹಿಸಿ ನೀಡಿದರು.   

ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಜಾಮೀಯ ಮಸೀದಿಯ ಮುಸ್ಲಿಂ ಯುವಕರು ಅಸ್ಸಾಂ ಹಾಗೂ ಬಿಹಾರ ರಾಜ್ಯದಲ್ಲಿನ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸಿ ನೀಡಿದರು.

ಇತ್ತೀಚೆಗೆ ಈ ಎರಡು ರಾಜ್ಯಗಳಲ್ಲಿ ಕಂಡು ಬಂದ ಭೀಕರ ಪ್ರವಾಹದಿಂದಾಗಿ ಮನೆ, ಮಠ ಕಳೆದುಕೊಂಡ ಜನರ ಸ್ಥಿತಿಯನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ಯುವಕರು ಹೋಬಳಿಯಲ್ಲಿನ ಮನೆ , ಮನೆಗಳಿಗೆ ತೆರಳಿದ ಯುವಕರು ಸಂತ್ರಸ್ತರಿಗಾಗಿ ಗ್ರಾಮದ ವತಿಯಿಂದ 3ಟನ್ ಅಕ್ಕಿ, 3ಟನ್ ಬಟ್ಟೆ, ಅಡಿಗೆ ಪಾತ್ರೆ, ಬ್ಲಾಂಕೇಟ್‍ಗಳು ಸೇರಿದಂತೆ ₹15 ಸಾವಿರ ಸಂಗ್ರಹಿಸಿದ್ದಾರೆ.

ಸಂಗ್ರಹಿಸಿದ ವಸ್ತುಗಳನ್ನು ಮುಡುಗೋಡು ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಪ್ಪ, ಜಾಮೀಯ ಮಸೀದಿಯ ಅಧ್ಯಕ್ಷ ಸಿರಾಜ್ ಅಬ್ದುಲ್ ಗಫೂರ್, ಲಕ್ಕವಳ್ಳಿ ಆರಕ್ಷಕ ನಿರೀಕ್ಷಕ ಚಂದ್ರಶೇಖರ್ ಸಮ್ಮಖದಲ್ಲಿ ಲಾರಿ ಮೂಲಕ ಕಳುಹಿಸಿದ್ದಾರೆ. ಜಹೀರ್ ಅಹಮದ್, ಸಾದಿಕ್ ಅಲಿ, ಗಯಾಸ್ ಬೇಗ್, ಮುಖಂಡರಾದ ನಾರಾಯಣ, ಅಣ್ಣೋಜಿರಾವ್ ಹಾಗೂ ಇತರರು ಇದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.