ADVERTISEMENT

ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲ

ವಿಚಾರಗೋಷ್ಠಿಯಲ್ಲಿ ಎಸ್‌ಪಿ ಅಣ್ಣಾಮಲೈ ವಿಷಾದ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:31 IST
Last Updated 20 ಮಾರ್ಚ್ 2017, 5:31 IST

ಚಿಕ್ಕಮಗಳೂರು: ಮನುಷ್ಯ ಎಷ್ಟೇ ವಿದ್ಯಾವಂತರಾಗಿ ಉನ್ನತ ಹುದ್ದೆಯ ಲ್ಲಿದ್ದರೂ ಕೂಡ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲನಾ ಗುತ್ತಿದ್ದಾನೆ. 50 ವರ್ಷಗಳ ಹಿಂದೆ ಇದ್ದ ಸಾಮಾಜಿಕ ಪಿಡುಗುಗಳು ಇಂದಿಗೂ ಮುಂದುವರೆದಿವೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ವಿಷಾದ ವ್ಯಕ್ತಪಡಿಸಿದರು.

ನಗರದ ಕುವೆಂಪು ಕಲಾಮಂದಿರ ದಲ್ಲಿ  ಎರಡನೇ ದಿನದ ರಾಜ್ಯ ಯುವ ಸಮ್ಮೇಳನ, ಕಾರ್ಯಾಗಾರ  ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ‘ಏನಾ ದರೂ ಆಗು ಮೊದಲು ಮಾನವನಾಗು’ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ, ತಮಿಳುನಾಡು, ಮಹಾ ರಾಷ್ಟ್ರ, ಆಂಧ್ರ ಪ್ರದೇಶಗಳಲ್ಲಿ ಪ್ರತಿ ವರ್ಷ 90 ಸಾವಿರ ವೈದ್ಯರು  ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದು, ನಾಲ್ಕು ರಾಜ್ಯಗಳಿಂದ ಸರಿ ಸುಮಾರು 6 ಲಕ್ಷ ಎಂಜಿನಿಯರ್‌ಗಳು ಹಾಗೂ ರಾಜ್ಯದಲ್ಲಿ ಪ್ರತಿವರ್ಷ 1.2 ಲಕ್ಷ ಎಂಜಿನಿಯರ್‌ಗಳು ವ್ಯಾಸಂಗ ಮುಗಿಸಿ ಉದ್ಯೋಗ ಸೇರುತ್ತಿ ದ್ದಾರೆ. ಆದರೂ ಕೂಡ  50 ವರ್ಷದ ಹಿಂದೆ ಇದ್ದ ಸಾಮಾಜಿಕ ಪಿಡುಗುಗಳು ಜೀವಂತವಾಗಿವೆ ಎಂದರು.

ನೀರನ್ನು ಕ್ರೋಡೀಕರಿಸುವ ತಂತ್ರ ಜ್ಞಾನದ ಮಾಹಿತಿ ರೈತರಿಗೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ 2015ರಲ್ಲಿ 62 ಮಂದಿ, ಕಳೆದ ವರ್ಷ 77  ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನುಷ್ಯ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಯಾರ  ಪರಿಶ್ರಮವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಮಾನವೀಯತೆಯನ್ನು ಬಿಡಬಾರದು  ಎಂದರು.

ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ಮಾತನಾಡಿ, ಸರ್ಕಾರ  ರೂಪಿಸಿರುವ ಕಾನೂನುಗಳಲ್ಲಿ ಮಾನವೀಯತೆ ತಳಪಾಯವಾಗಿದ್ದು, ಮಾನವ ಸಸ್ಯ ಸಂಕುಲ, ವನ್ಯಜೀವಿ ಸಂಕುಲವನ್ನು ಉಳಿಸಿಕೊಳ್ಳಬೇಕು, ಪರಿಸರ  ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.

ವಕೀಲ ಡಿ.ಎನ್.ಲಕ್ಷ್ಮಣಗೌಡ ಮಾತ ನಾಡಿ, ಯುವ ಪೀಳಿಗೆಗೆ ಗುರಿಯತ್ತ ಸಂಕಲ್ಪವಿರಬೇಕು ದೃಢ ಸಂಕಲ್ಪದಿಂದ ಏನಾದರೂ ಸಾಧಿಸಬಹುದು ಎಂದರು.
ಚಿಕ್ಕಮಗಳೂರು ಉಪ ವಿಭಾಗಾಧಿ ಕಾರಿಕಾರಿ ಸಂಗಪ್ಪ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳ ಹುಲ್ಲಹಳ್ಳಿ  ಮತ್ತಿತರರು ಹಾಜರಿದ್ದರು.

*
ಪ್ರತಿ ವರ್ಷ ಸಾವಿರಾರು ಮಂದಿ ಪದವಿ, ಚಿನ್ನದ ಪದಕ ಪಡೆಯು ತ್ತಿದ್ದಾರೆ. ಆದರೆ ಬರಗಾಲದಲ್ಲಿ ರೈತರಿಗೆ ಉತ್ತಮ ತಂತ್ರಜ್ಞಾನ ಒದಗಿಸಿ, ಅಗತ್ಯ ಸಲಹೆ ನೀಡಲು ಸಾಧ್ಯವಾಗುತ್ತಿಲ್ಲ.
-ಕೆ.ಅಣ್ಣಾಮಲೈ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT