ADVERTISEMENT

ರಾಜ್ಯದಲ್ಲಿ ದುರಾಡಳಿತದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:03 IST
Last Updated 15 ಜುಲೈ 2017, 6:03 IST

ಮೂಡಿಗೆರೆ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಇಡೀ ದೇಶದಲ್ಲಿಯೇ ಅತಿ ಹೆಚ್ಚು ದುರಾಡಳಿತ ನಡೆಸುತ್ತಿರುವ ಖ್ಯಾತಿ ಹೊಂದಿದೆ ಎಂದು ಶೃಂಗೇರಿ ಶಾಸಕ ಡಿ.ಎನ್‌. ಜೀವರಾಜ್‌ ಆರೋಪಿಸಿದರು.

ತಾಲ್ಲೂಕಿನ ಹೆಸ್ಗಲ್‌ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಬಿಳಗುಳಕ್ಕೆ ಗುರುವಾರ ಬಿಜೆಪಿಯ ವಿಸ್ತಾರಕ ಅಭಿಯಾನಕ್ಕಾಗಿ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಡತನ ರೇಖೆಗಿಂತ ಕೆಳಗಿರುವ ವರಿಗೆ ನೀಡುವ ಬಿಪಿಎಲ್‌ ಪಡಿತರ ವ್ಯವಸ್ಥೆಯನ್ನು ಕಾಂಗ್ರೆಸ್‌ ಸರ್ಕಾರವು ದುಡ್ಡು ಹೊಡೆಯುವ ದಂಧೆಯನ್ನಾಗಿ ಮಾಡಿಕೊಂಡಿದೆ. ನಿಜವಾದ ಫಲಾನು ಭವಿಗಳಿಗೆ ಅನ್ಯಾಯವಾಗುತ್ತಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳನ್ನು ಜಾರಿಗೊಳಿಸಿ, ಖುದ್ದು ಪಡಿತರದಾರರೇ ಬಂದು ಪಡಿತರ ಖರೀದಿಸಲು ನಿಯಮ ರೂಪಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಆ ಪದ್ಧತಿಗೆ ಎಳ್ಳುನೀರು ಬಿಟ್ಟಿದ್ದು, ದಂಧೆಕೋರರಿಗೆ ಅನುಕೂಲವಾಗುವಂತೆ ನಿಯಮ ರೂಪಿ ಸಿದೆ ಎಂದು ಆರೋಪಿಸಿದರು.

ADVERTISEMENT

ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ಜನರು ಬೇಸ ತ್ತಿದ್ದು, ರಾಜ್ಯ ಸರ್ಕಾರದ ಆಡಳಿತ ಕೊನೆ ಗೊಂಡರೆ ಸಾಕು ಎಂಬ ನಿರೀಕ್ಷೆಯ ಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರವು ಘೋಷಿಸಿದ ಸಾಲಮನ್ನಾ ಯೋಜನೆಯು ರೈತ ರಿಗೆ ತಲುಪಲೇ ಇಲ್ಲ. ಇದು ರೈತರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ’ ಎಂದು ಆರೋಪಿಸಿದರು.

ಬಿಜೆಪಿ ಪ್ರತಿ ಕಾರ್ಯಕರ್ತನೂ ವಿಸ್ತಾ ರಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆ ಯಾದ್ಯಂತ ಪಕ್ಷ ಸಂಘಟನೆ ಉತ್ತಮ ವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯು ವುದರಲ್ಲಿ ಸಂದೇಹವಿಲ್ಲ ಎಂದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡುಗ ಪ್ರಮೋದ್‌ ಕುಮಾರ್‌,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್‌,  ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್‌, ಅರೆಕೂಡಿಗೆ ಶಿವಣ್ಣ, ಸರೋಜ ಸುರೇಂದ್ರ, ಆಶಾ ಮೋಹನ್‌, ದೀಪಕ್‌ ದೊಡ್ಡಯ್ಯ, ಪ್ರವೀನ್‌ ಪೂಜಾರಿ, ಜಯಪಾಲ್‌, ಸಚ್ಚಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.