ADVERTISEMENT

ವಚನ ಕ್ರಾಂತಿಯಿಂದ ಸಮಾಜದ ಬದಲಾವಣೆ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಜಿ.ಎಚ್‌.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:40 IST
Last Updated 16 ಜನವರಿ 2017, 5:40 IST
ವಚನ ಕ್ರಾಂತಿಯಿಂದ ಸಮಾಜದ ಬದಲಾವಣೆ
ವಚನ ಕ್ರಾಂತಿಯಿಂದ ಸಮಾಜದ ಬದಲಾವಣೆ   

ತರೀಕೆರೆ: 12ನೇ ಶತಮಾನದಲ್ಲಿ ಹುಟ್ಟಿದ ಶಿವಯೋಗಿ ಸಿದ್ಧರಾಮೇಶ್ವರರು ಶೋಷಿತ ವರ್ಗಕ್ಕೆ ವಚನ ಕ್ರಾಂತಿಯ ಮೂಲಕ ಬದಲಾವಣೆಗಳನ್ನು ತಂದು ಕಾಯಕಕ್ಕೆ ಮುಂದಾಗಿ ಗೆಲುವು ತಮ್ಮದಾಗಿಸಿಕೊಳ್ಳಿ ಎಂಬ ಸಂದೇಶವನ್ನು ಶಿವಯೋಗಿ ಸಿದ್ಧರಾಮೇಶ್ವರ ಸಾರಿದ್ದರು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ನುಡಿದರು.

ಪಟ್ಟಣದ ಕನಕ ಕಲಾ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯಕ್ತಾ ಶ್ರಯದಲ್ಲಿ ಭಾನುವಾರ ನಡೆದ ಶಿವ ಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸ ವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅವರು ತ್ರಿಪದಿ, ಕೀರ್ತನೆ ಮತ್ತು ವಚನಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ರಚಿಸಿದ್ದರು.  ಅಂದು ಕೆರೆ, ಕಟ್ಟೆಗಳ ನಿರ್ಮಾಣದ ಬಗ್ಗೆ ಶಿವಯೋಗಿ ಸಿದ್ಧರಾಮೇಶ್ವರರು ಚಿಂತನೆ ನಡೆಸಿದ್ದರ ಪರಿಣಾಮವೇ ಇಂದು ದೊಡ್ಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಭೋವಿ ಜನಾಂಗದವರು ತೊಡಗಿ ಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

ದೈಹಿಕವಾಗಿ ಶ್ರಮವಹಿಸುವ ಈ ಜನಾಂಗವನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಗೊಳಿ ಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ನಿಗದಿಗೊಳಿಸಿದ್ದ ₹8 ಸಾವಿರ ಕೋಟಿ ಅನುದಾನ, 2016 ರ ಬಜೆಟ್‌ನಲ್ಲಿ ₹20 ಸಾವಿರ ಕೋಟಿಗೂ ಅಧಿಕವಾಗಿದೆ. ಈ ಯೋಜನೆಯಲ್ಲಿ ಹಣವನ್ನು  ಜನಸಂಖ್ಯೆ ಆಧಾರವಾಗಿಡಬೇಕೆಂಬ ನಿಯಮಾವಳಿ ಬೆಳಗಾವಿ ಅಧಿವೇಶನದಲ್ಲಿ ಕೈಗೊಳ್ಳಲಾ ಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಅಂತರ್ಜಾತಿ ವಿವಾಹ ಗಳಿಗೆ ಉತ್ತೇಜಿಸಿದರು ಎಂದರು.

ಪುರಸಭೆ ಅಧ್ಯಕ್ಷೆ ಪರ್ವೀನ್‌ತಾಜ್ ಮಾತನಾಡಿ, ಕಾಯಕವೇ ಕೈಲಾಸ ಎಂಬ ಧ್ಯೇಯವನ್ನು ಹೊಂದಿದ್ದ  ಶಿವಯೋಗಿ ಸಿದ್ದರಾಮೇಶ್ವರ ವಚನದಲ್ಲಿರುವ ಉತ್ತಮ ಅಂಶಗಳನ್ನು ನಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅವರನ್ನು ಚಿರಸ್ಥಾಯಿಯಾಗಿಸಬೇಕಿದೆ ಎಂದು ಹೇಳಿದರು.

ತಹಶೀಸೀಲ್ದಾರ್ ಜಿ.ಪಿ.ಮಂಜೇ ಗೌಡ, ತಾಲ್ಲೂಕು ಕಾರ್ಯ ನಿರ್ವಾಹ ಣಾಧಿಕಾರಿ ಎಸ್.ಎಲ್.ಗಂಗಾ ಧರಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವಿ.ಹರಿಪ್ರಸಾದ್, ರಾಜ್ಯ ಭೋವಿ ಸಂಘದ ಅಧ್ಯಕ್ಷ ಆರ್.ಶೇಷಣ್ಣ ಕುಮಾರ್, ಜಿಲ್ಲಾ ಭೋವಿ ಸಮಾಜದ ಮುಖಂಡ ಹೆಚ್.ವಿ.ಬಾಲರಾಜ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್. ಚಿತ್ರಸೇನ, ಪುರಸಭೆ ಪ್ರಭಾರಿ ಮುಖ್ಯಾ ಧಿಕಾರಿ ಎಂ.ಜಿ.ಕಾಂತರಾಜು, ಪುರಸಭೆ ಸಧಸ್ಯೆ ಮಾಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.