ADVERTISEMENT

ಶಾಂತಿನಗರ: ಮೂಲಸೌಕರ್ಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 5:18 IST
Last Updated 16 ಜುಲೈ 2017, 5:18 IST

ತರೀಕೆರೆ: ‘ನಾವು ಅನೇಕ ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಸರ್ಕಾರದಿಂದ ನಿವೇಶನವಾಗಲಿ ಅಥವಾ ಮನೆಗಳನ್ನಾಗಲಿ ಪಡೆದಿಲ್ಲ. ಯಾವ ಸೌಲಭ್ಯಗಳೂ ನಮಗೆ ದೊರಕುತ್ತಿಲ್ಲ’ ಎಂದು ಲಿಂಗದಹಳ್ಳಿ ಹೋಬಳಿಯ ಶಾಂತಿನಗರ ನಿವಾಸಿಗಳು ಜಿಲ್ಲಾ ಪಂಚಾಯಿತಿ ಸದಸ್ಯೆ ಅನುಸೂಯ ಗೋಪಿಕೃಷ್ಣ ಅವರಲ್ಲಿ ದೂರಿದರು.

ಲಿಂಗದಹಳ್ಳಿ ಗ್ರಾಮಕ್ಕೆ ಅನುಸೂಯ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆ ಗಳನ್ನು ಹೇಳಿಕೊಂಡ ನಿವಾಸಿಗಳು, ‘ಗ್ರಾಮ ಪಂಚಾಯಿತಿಯಿಂದಾಗಲಿ ಅಥವಾ ಯಾವುದೇ ಇಲಾಖೆ ಯಿಂದಾ ಗಲಿ ನಮಗೆ ಸಾಲ ಸೌಲಭ್ಯಗಳು ದೊರಕು ತ್ತಿಲ್ಲ. ತಮ್ಮ ನೆರವಿಗೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ಅನುಸೂಯ ಗೋಪಿಕೃಷ್ಣ ಮಾತನಾಡಿ, ‘ಸರ್ಕಾರದ ವಿವಿಧ ಯೋಜನೆಯಡಿ ಮಹಿಳೆಯರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ವಿವಿಧ ಸೌಲಭ್ಯಗಳು ದೊರಕುತ್ತಿವೆ. ಕೈ ಕಸುಬುಗಳ ಮೂಲಕ ಸ್ವಾವಲಂಬಿಗಳಾಗಲು ಸಹಾಯಧನದಲ್ಲಿ ಹೊಲಿಗೆ ಯಂತ್ರಗಳ ಸೌಲಭ್ಯದ  ಅವಕಾಶವಿದೆ.

ADVERTISEMENT

ಸಂಬಂಧಪಟ್ಟ ಇಲಾಖೆ ಯ ಅಧಿಕಾರಿಗಳ ಗಮನಕ್ಕೆ ತಂದು ಸಹಾಯ ಮಾಡುತ್ತೇನೆ’ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶಪ್ಪ, ಮುಖಂಡರಾದ ಸುರೇಶ್, ಮಂಜೇಗೌಡ, ಸ್ವಾಮಿ, ಕುಮಾರ, ರವಿ, ವಿಶ್ವನಾಥ, ಸವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.