ADVERTISEMENT

ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸಂಕಲ್ಪ

ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:37 IST
Last Updated 8 ಫೆಬ್ರುವರಿ 2017, 6:37 IST

ಚಿಕ್ಕಮಗಳೂರು:  ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶ್ರಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ಜಿಲ್ಲಾ ಸುವರ್ಣ ಕನ್ನಡ ಭವನದಲ್ಲಿ ಇತ್ತೀಚೆಗೆ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾ ಡಿದರು.
ತಾಲ್ಲೂಕಿನಲ್ಲೇ ಸಮ್ಮೇಳನ ನಡೆಯು ತ್ತಿರುವುದರಿಂದ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ.

ಸಮ್ಮೇಳನ ಹಿಂದೆಂದಿಗಿಂತಲೂ ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ನೋಡಿ ಕೊಳ್ಳುವ ಹೆಚ್ಚಿನ ಹೊಣೆಗಾರಿಕೆ ತಾಲ್ಲೂಕು ಸಮಿತಿಯದ್ದಾಗಿದೆ. ನಗರ ಅಲಂಕಾರ ಮತ್ತು ವ್ಯವಸ್ಥೆಗಳು ಅಚ್ಚುಕ ಟ್ಟಾಗಿ ನಡೆಯುವಂತೆ ನೋಡಿಕೊಳ್ಳ ಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಸಮ್ಮೇಳನ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಸಮ್ಮೇಳನದಲ್ಲಿ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಪಾತ್ರ ದೊಡ್ಡದಿದೆ. ಅದರ ಯಶಸ್ಸು ನಿಮ್ಮನ್ನು ಅವಲಂಬಿಸಿದೆ. ಸಮ್ಮೇಳನ ಸ್ವಾಗತ ಸಮಿತಿಯ ಉಪ ಸಮಿತಿಗಳು ತಯಾರಿ ನಡೆಸಬೇಕು. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದರೆ ಸಮ್ಮೇಳನ ಯಶಸ್ವಿಯಾ ಗುತ್ತದೆ ಎಂದರು.

ಜಿಲ್ಲಾ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ ನೀಡಲು ಹಾಗೂ ಪದಾಧಿ ಕಾರಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಮ್ಮೇಳನಕ್ಕೆ ಶುಭ ಕೋರುವ ಫ್ಲೆಕ್ಸ್‌ಗಳನ್ನು ನಗರದಲ್ಲಿ ಅಳವಡಿಸಲು ಸಭೆ ತೀರ್ಮಾನಿಸಿತು.

ಜಿಲ್ಲಾ ಸಮಿತಿ ಗೌರವ ಕಾರ್ಯದರ್ಶಿ ಬಸವರಾಜ್, ಸಂಚಾಲಕ ಮಹೇಶ್, ತಾಲ್ಲೂಕು ಸಮಿತಿ ಗೌರವ ಕಾರ್ಯದರ್ಶಿ ಸುರೇಶ್, ಹೋಬಳಿ ಅಧ್ಯಕ್ಷರಾದ ಆವ ತಿಯ ಎ.ಕೆ.ವಸಂತೇಗೌಡ, ವಸ್ತಾರೆ ನಿಂಗೇಗೌಡ, ಲಕ್ಯಾ ಕೃಷ್ಣಮೂರ್ತಿ, ಹಂಪಾಪುರ ಮಂಜೇಗೌಡ, ಕಾರ್ಯ ಕಾರಿ ಸಮಿತಿಯ ರಾಜೇಗೌಡ, ಡಿ.ಎಸ್. ಸಿದ್ದೇಗೌಡ, ಎ.ಜಿ.ವಿಶ್ವಮೂರ್ತಿ, ನೂರು ಲ್ಲಾಖಾನ್, ಈರೇಗೌಡ, ಎ.ಎನ್.ಪ್ರಸನ್ನ, ಗೌರವ ಕಾರ್ಯದರ್ಶಿ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.