ADVERTISEMENT

ರಸ್ತೆಗೆ ಬಂದ ಚರಂಡಿ ಕೊಳಚೆ ನೀರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 9:29 IST
Last Updated 20 ಸೆಪ್ಟೆಂಬರ್ 2017, 9:29 IST
ಹೊಸದುರ್ಗ ಪಟ್ಟಣದ ಮುಖ್ಯರಸ್ತೆ ಮೇಲೆ ಚರಂಡಿಯ ಕೊಳಚೆ ನೀರು ನಿಂತಿರುವುದು
ಹೊಸದುರ್ಗ ಪಟ್ಟಣದ ಮುಖ್ಯರಸ್ತೆ ಮೇಲೆ ಚರಂಡಿಯ ಕೊಳಚೆ ನೀರು ನಿಂತಿರುವುದು   

ಹೊಸದುರ್ಗ: ಪಟ್ಟಣದ ಹೊಳಲ್ಕೆರೆ ಮುಖ್ಯರಸ್ತೆಯ ಪೆಟ್ರೋಲ್‌ ಬಂಕ್‌ ಸಮೀಪದ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಮುಖ್ಯರಸ್ತೆಯಲ್ಲಿ ನಿತ್ಯವೂ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಾಗೂರು, ಶಿವನಿ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತವೆ.

ವಾಹನಗಳ ಚಕ್ರಕ್ಕೆ ಸಿಗುವ ಕೊಳಚೆ ನೀರು ರಸ್ತೆ ಬದಿಯಲ್ಲಿ ತಿರುಗಾಡುವ ಪಾದಚಾರಿಗಳಿಗೆ ಸಿಡಿಯುತ್ತಿದೆ. ಬಟ್ಟೆ ಗಲೀಜಾದಾಗ ವಾಹನ ಸವಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಮಸ್ಯೆ ತೀವ್ರಗೊಳ್ಳುವ ಮೊದಲು ಪುರಸಭೆಯವರು ಚರಂಡಿ ಸ್ವಚ್ಛಗೊಳಿಸಿ, ಕೊಳಚೆ ನೀರು ರಸ್ತೆ ಮೇಲೆ ಹರಿಯದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯರಾದ ಮಂಜುನಾಥ್‌, ನಾಗರಾಜು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.